ನವದೆಹಲಿ: ಚೀನಾ ಭಾರತ ಎನ್ಎಸ್ಜಿ ಸದಸ್ಯತ್ವವನ್ನು ಪಡೆಯಲು ವಿರೋಧಿಸುತ್ತಿಲ್ಲ, ಬದಲಾಗಿ ಸದಸ್ಯತ್ವ ಪಡೆಯಲು ಬೇಕಾದ ಪ್ರಕ್ರಿಯೆಗಳ ಬಗ್ಗೆ ಮಾತನಾಡುತ್ತಿದೆ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಹೇಳಿದ್ದಾರೆ.
ಭಾರತದ ಎನ್ಎಸ್ಜಿ ಸದಸ್ಯತ್ವಕ್ಕೆ ಚೀನಾದ ಬೆಂಬಲವನ್ನು ಪಡೆಯುವ ಭರವಸೆ ಇದ್ದು, ಈ ನಿಟ್ಟಿನಲ್ಲಿ ಚೀನಾದ ಮನವೊಲಿಸಲಿದ್ದೇವೆ. ಶತ್ರುತ್ವ ಇಲ್ಲದೇ ಎನ್ಎಸ್ಜಿ ಕಾರ್ಯ ಮಾಡುತ್ತದೆ, ಕೇವಲ ಒಂದು ದೇಶ ವಿರುದ್ಧ ಮತ ಹಾಕಿದರೆ ಭಾರತದ ಪ್ರಯತ್ನ ವ್ಯರ್ಥವಾಗುವ ಸಾಧ್ಯತೆ ಇದೆ ಎಂದು ಅವರು ಹೇಳಿದ್ದಾರೆ.
ಪರಮಾಣು ಪೂರೈಕಾ ಗುಂಪಿ(ಎನ್ಎಸ್ಜಿ)ಗೆ ಈ ವರ್ಷವೇ ಭಾರತ ಸೇರ್ಪಡೆಗೊಳ್ಳಲಿದೆ ಎಂಬ ಸಂಪೂರ್ಣ ವಿಶ್ವಾಸ ನಮಗಿದೆ. ಇದು ಭಾರತದ ಪರಮಾಣು ನಿಯಮಕ್ಕೆ ಅತೀ ಅಗತ್ಯವಾಗಿದೆ ಎಂದು ಅವರು ಹೇಳಿದ್ದಾರೆ.
ನಾನು ಸ್ವತಃ 23 ದೇಶಗಳ ಸಂಪರ್ಕ ಮಾಡಿದ್ದೇನೆ. ಎರಡು ಮೂರು ದೇಶಗಳು ಅಪಸ್ವರ ಎತ್ತಿದವು, ಆದರೆ ಅವುಗಳನ್ನು ನಾವು ಮನವೊಲಿಸುವ ಹಾದಿಯಲ್ಲಿದ್ದೇವೆ ಎಂದಿದ್ದಾರೆ.
ವಿದೇಶಾಂಗ ಕಾರ್ಯದರ್ಶಿ ಎಸ್. ಜೈಶಂಕರ್ ಜೂನ್ 16-17ಕ್ಕೆ ಚೀನಾಕ್ಕೆ ಭೇಟಿ ನೀಡಿ ಅಲ್ಲಿನ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ಚೀನಾ ಮನವೊಲಿಕೆಗೆ ಪ್ರಯತ್ನಿಸಿದ್ದಾರೆ ಎನ್ನಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.