ನವದೆಹಲಿ: ಭಾರತ ತನ್ನ ಎರಡನೇ ಬುಲೆಟ್ ಟ್ರೈನ್ ಹೊಂದುವ ನಿರೀಕ್ಷೆಯಲ್ಲಿದ್ದು, ಈ ರೈಲು ಸೇವೆ ದೆಹಲಿ ಮತ್ತು ವಾರಣಾಸಿ ನಡುವೆ ಚಲಿಸುತ್ತದೆ.
ಪ್ರಧಾನಿ ನರೇಂದ್ರ ಮೋದಿ ಸರ್ಕಾರ ರಾಷ್ಟ್ರ ರಾಜಧಾನಿ ನವದೆಹಲಿಯಿಂದ ವಾರಣಾಸಿಗೆ ಅಲಿಘಢ, ಆಗ್ರಾ, ಕಾನ್ಪುರ, ಲಕ್ನೋ, ಸುಲ್ತಾನ್ಪುರ ಮಾರ್ಗ ಮೂಲಕ ಬುಲೆಟ್ ರೈಲು ಸಂಪರ್ಕವನ್ನು ಘೋಷಿಸಿದೆ.
ಈ ಬುಲೆಟ್ ರೈಲು ದೆಹಲಿಯಿಂದ ವಾರಣಾಸಿಗೆ ಪ್ರಯಾಣವನ್ನು ಎರಡು ಗಂಟೆ 40 ನಿಮಿಷದಲ್ಲಿ ಪೂರ್ಣಗೊಳಿಸಲಿದೆ. ಉಳಿದ ರೈಲುಗಳು 10 ರಿಂದ 14 ಗಂಟೆ ಸಮಯವನ್ನು ತೆಗೆದುಕೊಳ್ಳುತ್ತವೆ.
ಯುಪಿ ಚುನಾವಣೆಯ ಹಿನ್ನಲೆಯಲ್ಲಿ ಆದಷ್ಟು ಬೇಗ ಈ ಬುಲೆಟ್ ರೈಲು ಕಾರ್ಯಾರಂಭ ಮಾಡಲಿದೆ ಎನ್ನಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.