ಬೆಂಗಳೂರು: ರಾಜ್ಯದಲ್ಲಿ ಸಂಪುಟ ಪುನಾರಚನೆಗೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಇದರಿಂದಾಗಿ ಸಿಎಂ ಸಿದ್ದರಾಮಯ್ಯ ಅವರ ಕಸರತ್ತಿಗೆ ಫಲ ಸಿಕ್ಕಂತಾಗಿದೆ.
ಶುಕ್ರವಾರ ಮತ್ತು ಶನಿವಾರ ಸುದೀರ್ಘ ಮಾತುಕತೆ ನಂತರ ಕೊನೆಗೂ ಸಂಪುಟ ಪುನರಾಚನೆಗೆ ಸೋನಿಯಾ ಗಾಂಧಿ ಒಪ್ಪಿಗೆ ನೀಡಿದ್ದಾರೆ.
ಮೂಲಗಳ ಪ್ರಕಾರ 13 ಸಚಿವರನ್ನು ಕೈಬಿಡಲಾಗಿದ್ದು, ನೂತನವಾಗಿ 12 ಸಚಿವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.
ಸಂಪುಟದಿಂದ ಅಂಬರೀಶ್ (ವಸತಿ ಸಚಿವ), ಪಿಟಿ ಪರಮೇಶ್ವರ್ ನಾಯಕ್ (ಕಾರ್ಮಿಕ ಸಚಿವ), ವಿನಯ್ ಕುಮಾರ್ ಸೊರಕೆ (ನಗರಾಭಿವೃದ್ಧಿ ಸಚಿವ), ಅಭಯ್ ಚಂದ್ರ ಜೈನ್ (ಮೀನುಗಾರಿಕೆ ಸಚಿವ), ಕಿಮ್ಮನೆ ರತ್ನಾಕರ್ (ಶಿಕ್ಷಣ ಸಚಿವ), ಯುಟಿ ಖಾದರ್ (ಆರೋಗ್ಯ ಸಚಿವ), ದಿನೇಶ್ ಗುಂಡೂರಾವ್ (ಆಹಾರ-ನಾಗರಿಕ ಪೂರೈಕೆ ಸಚಿವ), ಎಸ್ ಆರ್ ಪಾಟೀಲ್ (ಐಟಿ ಬಿಟಿ ಸಚಿವ), ಶಿವರಾಜ್ ತಂಗಡಗಿ (ಸಣ್ಣ ನೀರಾವರಿ ಸಚಿವ), ಬಿ. ಶ್ರೀನಿವಾಸ್ ಪ್ರಸಾದ್ (ಕಂದಾಯ ಸಚಿವ), ಬಿ ಶ್ಯಾಮನೂರು ಶಿವಶಂಕರಪ್ಪ (ತೋಟಗಾರಿಕೆ ಸಚಿವ), ಖಮರುಲ್ ಇಸ್ಲಾಂ (ಅಲ್ಪ ಸಂಖ್ಯಾತ ಸಚಿವ), ಸತೀಶ್ ಜಾರಕಿ ಹಳಿ (ಸಣ್ಣ ಕೈಗಾರಿಕೆ ಸಚಿವ), ಬಾಬೂರಾವ್ ಚಿಂಚನಸೂರ (ಜವಳಿ ಸಚಿವ) ಇವುರುಗಳನ್ನು ಕೈಬಿಡಲಾಗುತ್ತಿದೆ ಎನ್ನಲಾಗಿದೆ.
ಪ್ರಿಯಾಂಕ್ ಖರ್ಗೆ (ಚಿತ್ತಾಪುರ ಶಾಸಕ), ರುದ್ರಪ್ಪ ಲಮಾಣಿ (ಹಾವೇರಿ ಶಾಸಕ), ಸಂತೋಷ್ ಲಾಡ್ (ಧಾರವಾಡ ಜಿಲ್ಲೆಯ ಕಲಘಟಗಿ ), ಪ್ರಮೋದ್ ಮದ್ವರಾಜ್ (ಉಡುಪಿ ಶಾಸಕ), ಕಾಗೋಡು ತಿಮ್ಮಪ್ಪ (ಸಾಗರ ಶಾಸಕ), ತನ್ವೀರ್ ಸೇಠ್- (ಮೈಸೂರಿನ ನರಸಿಂಹರಾಜ ಕ್ಷೇತ್ರದ ಶಾಸಕ), ಶಿವಮೂರ್ತಿ ನಾಯಕ್ ಅಥವಾ ಗೋಪಾಲಕೃಷ್ಣ ಎನ್ ಎ ಹ್ಯಾರಿಸ್ಗೆ (ಶಾಂತಿನಗರ ಶಾಸಕ), ಕೆ ಸುಧಾಕರ್ (ಚಿಕ್ಕಬಳ್ಳಾಪುರ ಶಾಸಕ), ಸುಧಾಕರ್ (ಹಿರಿಯೂರು ಶಾಸಕ), ಎಂ ಕೃಷ್ಣಪ್ಪ (ವಿಜಯನಗರ ಶಾಸಕ), ರಮೇಶ್ ಕುಮಾರ್ (ಶ್ರೀನಿವಾಸಪುರ ಶಾಸಕ), ಎಸ್ ಎಸ್ ಮಲ್ಲಿಕಾರ್ಜುನ್ (ದಾವಣಗೆರೆ ಉತ್ತರ), ಅಪ್ಪಾಜಿ ನಾಡಗೌಡ ಅಥವಾ ಸಿದ್ದು ನ್ಯಾಮಗೌಡ ಇವರುಗಳನ್ನು ನೂತನ ಸಂಪುಟಕ್ಕೆ ಸೇರಿಸಿಕೊಳ್ಳಲಾಗುವುದು ಎನ್ನಲಾಗಿದೆ.
ಕೈಬಿಡಲಾಗುವ ಮತ್ತು ನೂತನವಾಗಿ ಸೇರ್ಪಡೆಗೊಳ್ಳುವ ಸಚಿವರುಗಳ ಪಟ್ಟಿ ಇನ್ನೂ ಅಂತಿಮವಾಗಿಲ್ಲ. ಕ್ಷಣ ಕ್ಷಣಕ್ಕೂ ಪಟ್ಟಿಯಲ್ಲಿ ಬದಲಾವಣೆಗಳಾಗುತ್ತಿದ್ದು, ಇನ್ನಷ್ಟೇ ಅಂತಿಮವಾಗಿ ಪಟ್ಟಿ ಬಿಡುಗಡೆಯಾಗಬೇಕಿದೆ.
ಈತನ್ಮಧ್ಯೆ ಸಿಎಂ ಸಿದ್ದರಾಮಯ್ಯ ನಾಳೆ ಭಾನುವಾರ (ಜೂನ್ 19) ರಂದು ಮಧ್ಯಾಹ್ನ 4 ಗಂಟೆಗೆ ನೂತನ ಸಚಿವರ ಪ್ರಮಾಣ ವಚನ ಸ್ವೀಕಾರವೂ ನಡೆಯಲಿದೆ ಎಂದಿರುವುದು ಪಟ್ಟಿ ಅಂತಿಮವಾಗಿದೆ ಎನ್ನಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.