ನವದೆಹಲಿ: ಮಾಜಿ ಕ್ರಿಕೆಟ್ ಪಟು ಸಚಿನ್ ತೆಂಡೂಲ್ಕರ್ ತಾನು ಆನ್ ಫೀಲ್ಡ್, ಆಫ್ ಫೀಲ್ಡ್ ಎರಡರಲ್ಲೂ ಲೆಜೆಂಡ್ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.
ಪಶ್ಚಿಮಬಂಗಾಳದ ಮಿಡ್ನಾಪುರ್ ಜಿಲ್ಲೆಯಲ್ಲಿನ ಸ್ವರ್ಣಮೊಯಿ ಸಸ್ಮಲ್ ಸಿಕ್ಷಾ ನಿಕೇತನ್ ಶಾಲೆ ಎರಡು ವರ್ಷಗಳ ಹಿಂದೆ ತಮಗೆ ಹಣಕಾಸು ನೆರವು ನೀಡುವಂತೆ ಸಚಿನ್ ತೆಂಡೂಲ್ಕರ್ ಅವರಿಗೆ ಪತ್ರ ಬರೆದಿತ್ತು.
ಇದಕ್ಕೆ ಸ್ಪಂದಿಸಿರುವ ಸಚಿನ್ ಸಂಸತ್ತು ಸದಸ್ಯರ ಸ್ಥಳಿಯ ಪ್ರದೇಶ ಅಭಿವೃದ್ಧಿ ಅನುದಾನದಿಂದ ಬರೋಬ್ಬರಿ 75 ಲಕ್ಷ ನೆರವನ್ನು ನೀಡಿದ್ದಾರೆ. ಕಳೆದ ಹಣಕಾಸು ವರ್ಷದಲ್ಲಿ ಈ ಅನುದಾನವನ್ನು ಶಾಲೆಗೆ ನೀಡಲಾಗಿದೆ.
ಗ್ರಂಥಾಲಯ, ಲ್ಯಾಬೋರೇಟರಿ, ಹುಡುಗಿಯರಿಗೆ ಕೊಠಡಿಯನ್ನು ಈ ಅನುದಾನದಿಂದ ನಿರ್ಮಿಸಲಾಗುತ್ತಿದೆ.
ಸಚಿನ್ ಅವರ ಈ ಉಪಕಾರಕ್ಕೆ ಶಾಲೆಯ ಆಡಳಿತ ಮಂಡಳಿ ಅತೀವ ಸಂತಸ ವ್ಯಕ್ತಪಡಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.