ದೆಹಲಿ: ಚೀನಾ ಮತ್ತೊಂದು ಪ್ರಚೋದನಾಕಾರಿ ಕೃತ್ಯವನ್ನು ಎಸಗಿದೆ, ಕಳೆದ ವಾರ ಅರುಣಾಚಲ ಪ್ರದೇಶದ ಯಂಗಸ್ಟೇ ಪ್ರದೇಶದಲ್ಲಿ ಚೀನಾ ಸೇನಾಪಡೆಗಳು ಅತಿಕ್ರಮಣ ಮಾಡಿವೆ ಎಂದು ವರದಿಗಳು ತಿಳಿಸಿವೆ.
ಭಾರತದ ಪರಮಾಣು ಪೂರೈಕಾ ರಾಷ್ಟ್ರಗಳ ಸದಸ್ಯತ್ವ ಪಡೆಯುವ ಪ್ರಯತ್ನಕ್ಕೆ ಚೀನಾ ತಡೆಯೊಡ್ಡಿದ ಸಂದರ್ಭದಲ್ಲೇ ಈ ಗಡಿ ಅತಿಕ್ರಮಣ ನಡೆದಿದೆ ಎನ್ನಲಾಗಿದೆ.
ಪೀಪಲ್ಸ್ ಲಿಬರೇಶನ್ ಆರ್ಮಿಯ ಒಟ್ಟು 250 ಯೋಧರು 4 ಗುಂಪುಗಳಾಗಿ ಜೂನ್ 9 ರಂದು ಅರುಣಾಚಲ ಪ್ರದೇಶದ ಪೂರ್ವ ಕಮೆಂಗ್ ಜಿಲ್ಲೆಯಲ್ಲಿ ಅತಿಕ್ರಮಣ ಮಾಡಿದ್ದಾರೆ ಎಂದು ರಕ್ಷಣಾ ಸಚಿವಾಲಯ ಮತ್ತು ಗುಪ್ತಚಲ ಇಲಾಖೆಯ ಮೂಲಗಳು ತಿಳಿಸಿವೆ ಎಂದು ವರದಿಯಾಗಿದೆ.
ಅತಿಕ್ರಮಣ ಮಾಡಿದ ಯೋಧರು ಒಟ್ಟು 3 ಗಂಟೆಗಳ ಕಾಲ ಇಲ್ಲಿ ಇದ್ದರು, ಈ ಬಗ್ಗೆ ಚೀನಾಗೆ ತನ್ನ ವಿರೋಧವನ್ನು ಸಲ್ಲಿಕೆ ಮಾಡಲು ಭಾರತೀಯ ಸೇನೆ ಮುಂದಾಗಿದೆ.
ಈ ವರ್ಷ ಚೀನಾ ಸೇನೆ ಮಾಡುತ್ತಿರುವ ಮೊದಲ ಗಡಿ ಅತಿಕ್ರಮಣ ಇದಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.