ಶ್ರೀನಗರ: ಶ್ರೀನಗರದಿಂದ 35 ಕಿ.ಮೀ ದೂರದ ಗಂಡರ್ಬಲ್ನಲ್ಲಿ ನಡೆಯುತ್ತಿರುವ ಖೀರ್ ಭವಾನಿ ಮೇಳದಲ್ಲಿ ಭಾಗವಹಿಸಿದ ಜಮ್ಮು ಕಾಶ್ಮೀರ ಮುಖ್ಯಮಂತ್ರಿ ಮೆಹಬೂಬ ಮುಫ್ತಿ ಅವರು ಕಾಶ್ಮೀರಿ ಪಂಡಿತರೊಂದಿಗೆ ಮಾತುಕತೆ ನಡೆಸಿದರು.
ಭಾನುವಾರ ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ನಡೆದ ಜಟಾಪಟಿಯಲ್ಲಿ ಗಾಯಗೊಂಡ ಇಬ್ಬರು ಪುರೋಹಿತರನ್ನೂ ಕಂಡು ಮಾತನಾಡಿಸಿದರು. ಪಂಡಿತರಿದ್ದ ಬಸ್ಸೊಂದು ಪೊಲೀಸ್ ಮತ್ತು ಪ್ರತಿಭಟನಾಕಾರರ ಕಲಹದಲ್ಲಿ ಸಿಕ್ಕಿ ಹಾಕಿಕೊಂಡಿತ್ತು, ಬಸ್ ಮೇಲೆ ಕಲ್ಲು ತೂರಾಟ ನಡೆದಿತ್ತು.
ಈ ಘಟನೆಯಲ್ಲಿ ಮಹಿಳೆಯರಿಗೂ ಗಾಯವಾಗಿದೆ, ಘಟನೆಯನ್ನು ಮುಫ್ತಿ ಖಂಡಿಸಿದ್ದಾರೆ.
ಸೋಮವಾರ ಕಾಶ್ಮೀರಿ ಪಂಡಿತರು ಖೀರ್ ಭವಾನಿ ದೇಗುಲದಲ್ಲಿ ವಾರ್ಷಿಕ ಮೇಳವನ್ನು ಆಚರಿಸಿದರು, ಇದರಲ್ಲಿ ಮುಫ್ತಿಯವರೂ ಭಾಗವಹಿಸಿ ಪೂಜಾ ಕೈಂಕರ್ಯ ನೆರವೇರಿಸಿದರು. ಈ ವೇಳೆ ಪಂಡಿತರು ಕಾಶ್ಮೀರದ ಬೆನ್ನೆಲುಬು ಎಂದು ಅವರು ಬಣ್ಣಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.