ನವದೆಹಲಿ: ಶಾಹಿದ್ ಕಪೂರ್ ಅಭಿನಯದ ’ಉಡ್ತಾ ಪಂಜಾಬ್’ ಒಂದು ಸಿನಿಮಾ, ಅದು ಡ್ರಗ್ ಸಮಸ್ಯೆಯನ್ನು ತೋರಿಸುತ್ತದೆ ಎಂದು ಬಾಂಬೆ ಹೈಕೋರ್ಟ್ ಸೋಮವಾರ ಅಭಿಪ್ರಾಯಪಟ್ಟಿದೆ.
ಸಿಬಿಎಫ್ಸಿಯಲ್ಲಿ ಸೆನ್ಸಾರ್ ಎಂಬ ಶಬ್ದದ ಉಲ್ಲೇಖವಿಲ್ಲ, ಹೀಗಾಗಿ ಬೋರ್ಡ್ ತನ್ನ ಅಧಿಕಾರವನ್ನು ಸಂವೀಧಾನ ಮತ್ತು ಸುಪ್ರೀಂಕೋರ್ಟ್ ನಿರ್ದೇಶನದಂತೆ ಮಾತ್ರ ಬಳಸಿಕೊಳ್ಳಬೇಕು ಎಂದು ತಿಳಿಸಿದ್ದಾರೆ.
ಕೆಲವೊಂದು ಸನ್ನಿವೇಶಗಳನ್ನು ಕತ್ತರಿಸಲು ಹೇಳಿ, ಆದರೆ ಸೆನ್ಸಾರ್ ಮಾಡಬೇಡಿ. ಸಿಬಿಎಫ್ಸಿಗೆ ಸೆನ್ಸಾರ್ ಮಾಡುವ ಹಕ್ಕಿಲ್ಲ. ಸೃಜನಾತ್ಮಕ ಸ್ವಾತಂತ್ರ್ಯವನ್ನು ಅನವಶ್ಯಕವಾಗಿ ತಡೆಯಬಾರದು, ಸಿನಿಮಾ ತಯಾರಕರ ಮೇಲೆ ಯಾರೂ ಪ್ರಭುತ್ವ ಸಾಧಿಸುವ ಹಾಗಿಲ್ಲ’ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ ಎನ್ನಲಾಗಿದೆ.
ಅಲ್ಲದೇ ಉಡ್ತಾ ಪಂಜಾಬ್ನಲ್ಲಿ ಪಂಜಾಬ್ನ್ನು ಕೆಟ್ಟದಾಗಿ ಚಿತ್ರಿಸುವ ಅಥವಾ ಸಿಬಿಎಫ್ಸಿ ಹೇಳಿದಂತೆ ಭಾರತದ ಸಾರ್ವಭೌಮತೆ ಮತ್ತು ಸೌಹರ್ದತೆಗೆ ಧಕ್ಕೆ ತರುವ ಯಾವುದೇಅಂಶಗಳು ಇಲ್ಲ ಎಂದು ಹೈಕೋರ್ಟ್ ಹೇಳಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.