ನವದೆಹಲಿ: ಉತ್ತರಪ್ರದೇಶದ ಶಾಮ್ಲಿ ಜಿಲ್ಲೆಯ ಮುಸ್ಲಿಂ ಬಾಹುಳ್ಯವುಳ್ಳ ಕೈರಾನ ಗ್ರಾಮದಿಂದ ಹಿಂದೂ ಕುಟುಂಬಗಳು ಸಾಮೂಹಿಕವಾಗಿ ವಲಸೆ ಹೋಗುತ್ತಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರೀ ಆಕ್ರೋಶಗಳು ಭುಗಿಲೆದ್ದಿವೆ.
ಮುಸ್ಲಿಮರ ದೌರ್ಜನ್ಯ ಮತ್ತು ಹಿಂಸೆಯನ್ನು ತಾಳಲಾರದೆ ಹಲವಾರು ಹಿಂದೂ ಕುಟುಂಬಗಳು ಇಲ್ಲಿಂದ ವಲಸೆ ಹೋಗುತ್ತಿವೆ ಎಂಬ ಆರೋಪಗಳು ಕೇಳಿ ಬಂದಿವೆ.
ಈ ಘಟನೆಯನ್ನು ತೀವ್ರವಾಗಿ ಖಂಡಿಸಿರುವ ಆರ್ಎಸ್ಎಸ್ ವಕ್ತಾರ ರಾಕೇಶ್ ಸಿನ್ಹಾ, ’1947ರಲ್ಲಿ ದೇಶವನ್ನು ವಿಭಜಿಸಿದ ಹಿಂದೂ ವಿರೋಧಿ ಮನಃಸ್ಥಿತಿ ಇಂದು ಕೈರಾನದಲ್ಲಿ ಹಿಂದುಗಳು ಸಾಮೂಹಿಕವಾಗಿ ಪಲಾಯನ ಮಾಡುವಂತೆ ಮಾಡಿದೆ. ಪಾಕ್ ಸಂಸ್ಥಾಪಕ ಮಹಮ್ಮದ್ ಅಲಿ ಜಿನ್ನಾನ ಸಿದ್ಧಾಂತ ಇದು’ ಎಂದಿದ್ದಾರೆ.
’ಕೈರಾನದ ಹಿಂದೂಗಳ ವಿಷಯದಲ್ಲಿ ಮಧ್ಯಪ್ರವೇಶ ಮಾಡಿ ಅವರಿಗೆ ಪುನರ್ವಸತಿ ಕಲ್ಪಿಸಬೇಕು ಮತ್ತು ಜಿನ್ನಾ ಮನಸ್ಥಿತಿಯ ಬಗ್ಗೆ ಹೋರಾಡುವ ಅವಶ್ಯಕತೆ ಇದೆ’ ಎಂದಿದ್ದಾರೆ.
ಕೈರಾನ ಮತ್ತೊಂದು ಕಾಶ್ಮೀರವಾಗುತ್ತಿದೆ, ಹಿಂದೂಗಳ ವಲಸೆಯನ್ನು ಸಹಿಸಲು ಸಾಧ್ಯವಿಲ್ಲ ಎಂದಿದ್ದಾರೆ.
ಇಲ್ಲಿನ 346 ಹಿಂದೂ ಕುಟುಂಬಗಳು ಪಲಾಯನ ಮಾಡಿ ನಿಗರ್ತಿಕವಾಗಿ ಬದುಕುತ್ತಿದೆ ಎಂದು ಬಿಜೆಪಿ ಶಾಸಕ ಹುಕುಂ ಸಿಂಗ್ ಆರೋಪಿಸಿದ್ದಾರೆ.
ಘಟನೆಯ ಬಗ್ಗೆ ಪೊಲೀಸ್ ತನಿಖೆ ನಡೆಯುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.