ಡೆಹ್ರಾಡುನ್: ಭಾರತೀಯ ಸೇನೆಯಲ್ಲಿ ಅಡುಗೆ ಮಾಡುತ್ತಿರುವ ಗೋಪಾಲ್ ಸಿಂಗ್ ಬಿಶ್ತ್ ಅವರ ಪುತ್ರ ರಾಜೇಂದ್ರ ಬಿಶ್ತ್ ಭಾರತೀಯ ಸೇನಾ ಅಕಾಡೆಮಿ ವತಿಯಿಂದ ಅತ್ಯುತ್ತಮ ಕೆಡೆಟ್ ಪ್ರಶಸ್ತಿ ಪಡೆದುಕೊಂಡಿದ್ದಾರೆ.
ರಾಜೇಂದ್ರ ಇತರ 609 ಕೆಡೆಟ್ಗಳ ಜೊತೆ ಪದವಿ ಪೂರೈಸಿದ್ದು, ’ಸ್ವರ್ಡ್ ಆಫ್ ಆನರ್’ (Sword Of Honour) ಪ್ರಶಸ್ತಿ ಪಡೆದಿದ್ದಾರೆ. ಅವರು ಅತ್ಯುತ್ತಮ ಆಲ್ರೌಂಡ್ ’ಜಂಟಲ್ಮ್ಯಾನ್ ಕ್ಯಾಡೆಟ್’ ಪ್ರಶಸ್ತಿಗೂ ಪಾತ್ರರಾಗಿದ್ದಾರೆ.
ರಾಜೇಂದ್ರ ಓರ್ವ ಆರ್ಮಿ ಆಫಿಸರ್ ಆಗುವ ಎಲ್ಲಾ ಕ್ಷಮತೆ ಹೊಂದಿದ್ದು, ಎಲ್ಲಾ ರೀತಿಯಲ್ಲೂ ಪ್ರೋತ್ಸಾಹ ನೀಡಿದ್ದೇನೆ ಎಂದು ರಾಜೇಂದ್ರ ಅವರ ತಂದೆ ಗೋಪಾಲ್ ಹೇಳಿದ್ದಾರೆ.
ಯಾವುದೇ ಗುರಿಯನ್ನು ಸಾಧಿಸಲು ಕಠಿಣ ಅಭ್ಯಾಸ, ಪ್ರಯತ್ನ ಮತ್ತು ಸಾಧನೆಯ ಅಗತ್ಯವಿದೆ. ಈ ಪ್ರಶಸ್ತಿ ಪಡೆದದ್ದು ತುಂಬ ಸಂತಸ ತಂದಿದೆ ಎಂದು ರಾಜೇಂದ್ರ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.