ಹುಮನಾಬಾದ್ : 2001ರ ಮೇ13 ರಂದು ಮೃತಪಟ್ಟಿರುವ ಲಾಲಧರಿಮುತ್ಯಾ ಅವರು ನೇತಾಜಿಯವರಾಗಿದ್ದಿರಬಹುದೇ ಎಂಬ ಅನುಮಾನಗಳು ಮೂಡುತ್ತಿದೆ.
ಲಾಲಧರಿ ಮುತ್ಯಾ ರವರು 2001ರಲ್ಲಿ ಮೃತಪಟ್ಟಿದ್ದು, ಅವರ ಸಾಮಾನುಗಳಿರುವ ಪೆಟ್ಟಿಗೆಯನ್ನು ಕಳೆದ ಡಿಸೆಂಬರ್ನಲ್ಲಿ ಮಹಾರಾಷ್ಟ್ರ ಉರ್ಮಾಗಾದ ಸಂತರಾಮ ಅತುಮಲ ಎಂಬುವವರು ತೆರೆದು ನೋಡಿದ್ದು ಅದರಲ್ಲಿ ಎರಡನೇ ಮಹಾಯುದ್ಧದ ವೇಳೆ ಇದ್ದ ಸಾಮಗ್ರಿಗಳು ಪತ್ತೆಯಾಗಿದೆ.
ಎರಡನೇ ಮಹಾಯುದ್ಧದ ಸಂದರ್ಭ ಬಳಸಲಾಗುತ್ತಿದ್ದ, ಎಂ 541- ರೂಹ್ಲಾ ಗಡಿಯಾರ, ಪ್ಯಾರಿಸ್ ದೇಶದ ದುರ್ಬಿನ್, 1932 ರ ಮಾಡೆಲ್ನ ಲಂಡನ್ನ ದಿಕ್ಸೂಚಿ, ಬ್ಯಾಚ್ಗಳು, ಸೇನಾ ಸಮವಸ್ತ್ರ, ವಿವಿಧ ರಾಷ್ಟ್ರಗಳ ಕರೆನ್ಸಿ, ಟೋಪಿಗಳು, ಪ್ರತಿದಿನ ಬಟ್ಟೆಗೆ ಹಚ್ಚಿಕೊಳ್ಳುತ್ತಿದ್ದ ಚಿಹ್ನೆಗಳು, ಮಿಲಿಟರಿಯಲ್ಲಿ ಬಳಸುತ್ತಿದ್ದ ಜಾಕೆಟ್ ಸೇರಿದಂತೆ ಹಲವು ವಸ್ತುಗಳು ಅವರ ಪಟ್ಟಿಗೆಯಲ್ಲಿ ಪತ್ತೆಯಾಗಿವೆ.ಅಲ್ಲದೇ ಇದನ್ನು ಸಂಸದರ ಮೂಲಕ ಪ್ರಧಾನಿ ಸಚಿವಾಲಯಕ್ಕೆ ಜ.12ಕ್ಕೆ ತಿಳಿಸಲಾಗಿದ್ದು, ಆನ್ ಲೈನ್ ಮುಲಕ ಮಾತುಕತೆ ನಡೆಸಿದ್ದಾರೆ. ಅವರ ಬಳಸಿದ ಟೋಪಿಯಲ್ಲಿರುವ ಕೂದಲುಗಳನ್ನು ಸಂಗ್ರಹಿಸಿದ್ದು, ಡಿಎನ್ಎ ಪರೀಕ್ಷೆಗೆ ಕಳುಹಿಸುವ ಸಾಧ್ಯತೆಗಳಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.