ನವದದೆಹಲಿ: ಕಾಲ್ ಡ್ರಾಪ್ಗಳನ್ನು ನಿಗ್ರಹಿಸಲು ಟೆಲಿಕಾಂ ನಿರ್ವಾಹಕರು ಸರ್ಕಾರಕ್ಕೆ 100 ದಿನಗಳ ಕಾರ್ಯಯೋಜನೆಯನ್ನು ಮಂಡಿಸಿದ್ದಾರೆ. ಟೆಲಿಕಾಂ ನಿರ್ವಾಹಕರು 70,000 ಬೇಸ್ ಟ್ರನ್ಸ್ರಿಸೀವರ್ ಕೇಂದ್ರ (ಬಿಟಿಎಸ್)ಗಳನ್ನು ಸ್ಥಾಪಿಸಲು ಕೋರಿದ್ದಾರೆ.
ಕಾಲ್ ಡ್ರಾಪ್ ಸಮಸ್ಯೆಯನ್ನು ನಿವಾರಿಸಲು 100 ದಿನಗಳ ಒಳಗೆ ಬಿಟಿಎಸ್ ಕೇಂದ್ರಗಳನ್ನು ಸ್ಥಾಪಿಸಲು ಟೆಲಿಕಾಂ ನಿರ್ವಾಹಕರ ಇಲಾಖೆಯ ಕಾರ್ಯದರ್ಶಿ ಜೆ.ಎಸ್. ದೀಪಕ್ ಮತ್ತಿತರ ಅಧಿಕಾರಿಗಳಿಗೆ ಯೋಜನೆಯ ಪಟ್ಟಿಯನ್ನು ಹಸ್ತಾಂತರಿಸಿದೆ.
ದೇಶದಾದ್ಯಂತ 22 ಟೆಲಿಕಾಂ ವಲಯಗಳ ನೆಟ್ವರ್ಕ್ಗಳನ್ನು ಉತ್ತಮಗೊಳಿಸಲಾಗುವುದು. ಮೊಬೈಲ್ ಸಿಗ್ನಲ್ ಪಡೆಯಲು ಅಕ್ರಮ ಮೊಬೈಲ್ ಆವರ್ತಕ ಸ್ಥಾಪನೆಗೆ ಜನರ ಹಸ್ತಕ್ಷೇಪವನ್ನು ನಿವಾರಿಸಲು ಸರ್ಕಾರದ ಸಹಾಯವನ್ನು ಕೋರಲಾಗಿದೆ ಎಂದು ಸೆಲ್ಯೂಲರ್ ಆಪರೇಟರ್ಸ್ ಅಸೋಸಿಯೇಶನ್ ಆಫ್ ಇಂಡಿಯಾದ ಅಧ್ಯಕ್ಷ ರಾಜನ್ ಎಸ್. ಮ್ಯಾಥ್ಯೂಸ್ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.