ನವದೆಹಲಿ: ಕೇಂದ್ರ ಸರ್ಕಾರಿ ಉದ್ಯೋಗಿಗಳು ಆರ್ಎಸ್ಎಸ್ ಮತ್ತು ಜಮಾತ್-ಇ-ಇಸ್ಲಾಮಿಕ್ ಸಂಘಟನೆಯಲ್ಲಿ ಇರಬಾರದು ಎಂದು ಹಿಂದಿನ ಯುಪಿಎ ಸರ್ಕಾರ ರೂಪಿಸಿದ್ದ ನಿಯಮವನ್ನು ನರೇಂದ್ರ ಮೋದಿ ಸರ್ಕಾರ ಕಿತ್ತೊಗೆಯಲು ಮುಂದಾಗಿದೆ.
ಐದು ದಶಕಗಳ ಹಿಂದಿನ ನಿಯಮ ಇದಾಗಿದ್ದು, ಮೋದಿ ಸರ್ಕಾರ ಇದನ್ನು ರದ್ದುಗೊಳಿಸಲು ಮುಂದಾಗಿದೆ. ಇದರಿಂದ ಆರ್ಎಸ್ಎಸ್ ಮತ್ತು ಜಮಾತ್ ಸಂಘಟನೆಯಲ್ಲಿ ಇರುವವರು ಇನ್ನು ಮುಂದೆ ಕೇಂದ್ರ ಉದ್ಯೋಗವನ್ನು ಪಡೆಯಲು ಯಾವುದೇ ನಿರ್ಬಂಧವಿರುವುದಿಲ್ಲ.
ಸರ್ಕಾರದ ನಿರ್ಧಾರವನ್ನು ಆರ್ಎಸ್ಎಸ್ ಸ್ವಾಗತಿಸಿದೆ.
ಕೇಂದ್ರದ ಉದ್ಯೋಗಿಗಳನ್ನು ಆರ್ಎಸ್ಎಸ್ನಲ್ಲಿ ಭಾಗವಹಿಸದಂತೆ ನಿರ್ಬಂಧಿಸಿದ್ದ ಯುಪಿಎ ಸರ್ಕಾರದ ಕ್ರಮ ಅಸಂವಿಧಾನಿಕ ಎಂದು ಈಗಾಗಲೇ ನ್ಯಾಯಾಲಯಗಳಲ್ಲಿ ಸಾಬೀತಾಗಿದೆ ಎಂದು ಸಂಘದ ಮುಖಂಡರಾದ ಮನಮೋಹನ್ ವೈದ್ಯ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.