ನವದೆಹಲಿ: ಭಾರತದ ರೈಲ್ವೆ ನಿಲ್ದಾಣಗಳಲ್ಲಿ ವೈಫೈ ಸೇವೆ ಆರಂಭವಾಗಿದ್ದು, ನಿಲ್ದಾಣಗಳು ಸೈಬರ್ ಕೆಫೆಗಳಾಗಿ ಪರಿವರ್ತನೆಗೊಳ್ಳುತ್ತಿವೆ. ನಗರ ಪ್ರದೇಶಗಳಲ್ಲಿ ಬ್ರಾಡ್ಬ್ಯಾಂಡ್ ಸೇವೆ ಮತ್ತು ಇಂಟರ್ನೆಟ್ ಹೆಚ್ಚು ವೇಗವಾಗಿದೆ. ಆದರೆ ಸಣ್ಣ ಪಟ್ಟಣ ಪ್ರದೇಶದ ಜನರು ವೈಫೈ ಸೇವೆ ಪಡೆಯಲು ರೈಲ್ವೆ ನಿಲ್ದಾಣಗಳನ್ನು ಉತ್ತಮ ರೀತಿಯಲ್ಲಿ ಬಳಸುತ್ತಿದ್ದಾರೆ.
ಗೂಗಲ್ ಭಾರತದ ರೈಲು ನಿಲ್ದಾಣಗಳಲ್ಲಿ ಹೈ-ಸ್ಪೀಡ್ ವೈಫೈಗಳನ್ನು ಸ್ಥಾಪಿಸಿದ್ದು, 15 ನಿಲ್ದಾಣಗಳ ಡೇಟಾ ಪ್ರಕಾರ ಟೈಯರ್- 2 ನಿಲ್ದಾಣಗಳಲ್ಲಿ ಟೈಯರ್- 1 ನಿಲ್ದಾಣಗಳಿಗಿಂತ 20 ಪಟ್ಟು ಅಧಿಕ ಇಂಟರ್ನೆಟ್ ಬಳಕೆ ಮಾಡಲಾಗಿದೆ. ಪಟ್ಟಣಗಳ ರೈಲು ನಿಲ್ದಾಣಗಳಲ್ಲಿ ಫೋನ್ ಅಪ್ಗ್ರೇಡ್, ಅಪ್ಲಿಕೇಶನ್ ಡೌನ್ಲೋಡ್, ಸಿನಿಮಾ ಸ್ಟ್ರೀಮಿಂಗ್ಗೆ ವೈಫೈ ಬಳಸಲಾಗುತ್ತಿದೆ.
ವೀಡಿಯೋ ಸ್ಟ್ರೀಮಿಂಗ್, ಉತ್ತಮ ಗುಣಮಟ್ಟದ ಚಿತ್ರಗಳನ್ನು ಅಪ್ಲೋಡ್ ಮಾಡಲು, ಅಪ್ಲಿಕೇಶನ್ ಮತ್ತಿತರ ಡೌನ್ಲೋಡ್ಗಳಿಗೆ ಉನ್ನತ ಮಟ್ಟದ ಡೌನ್ಲೋಡ್ ಸ್ಪೀಡ್ ಒದಗಿಸುವಲ್ಲಿ ನಾವು ಪ್ರಯತ್ನಿಸುತ್ತಿದ್ದೇವೆ ಎಂದು ಗೂಗಲ್ ಇಂಡಿಯಾ ಮುಖ್ಯಸ್ಥ ಗುಲ್ಜಾರ್ ಆಜಾದ್ ಹೇಳಿದ್ದಾರೆ.
ಕಚೇಗುಡ, ರಾಂಚಿ, ರಾಯಪುರ, ಉಜ್ಜಯಿನಿ ಸೇರಿದಂತೆ 15 ನಿಲ್ದಾಣಗಳಲ್ಲಿ ವೈಫೈ ಸೇವೆ ಆರಂಭಿಸಲಾಗಿದ್ದು, ವಾರದಲ್ಲಿ 4,30,000 ಬಳಕೆದಾರರನ್ನು ಹೊಂದಿದೆ ಎಂದು ಗೂಗಲ್ ಹೇಳಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.