ನವದೆಹಲಿ: ಭಾರತೀಯ ಅಂಚೆ ಇಲಾಖೆ ತನ್ನ ಪೇಮೆಂಟ್ ಬ್ಯಾಂಕ್ನ ಲೋಗೋ (ಲಾಂಛನ), ಟ್ಯಾಗ್ಲೈನ್ ವಿನ್ಯಾಸಕ್ಕೆ ಸಾರ್ವಜನಿಕರನ್ನು ಆಹ್ವಾನಿಸಿದೆ. ಸ್ಪರ್ಧೇಯ ವಿಜೇತರಿಗೆ ರೂ.50,000 ಬಹುಮಾನ ನೀಡಲಾಗುವುದು ಎಂದು ಇಲಾಖೆ ಘೋಷಿಸಿದೆ.
ಅಂಚೆ ಇಲಾಖೆ MyGov ವೆಬ್ಸೈಟ್ನಲ್ಲಿ ಆರಂಭಿಸಿರುವ ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ನ ಲೋಗೋ ಮತ್ತು ಟ್ಯಾಗ್ಲೈನ್ ವಿನ್ಯಾಸಕ್ಕೆ ಈ ಸ್ಪರ್ಧೆಯನ್ನು ಜೂ. 10ರಂದು ಆರಂಭಿಸಲಾಗಿದೆ. ಭಾರತದ ಎಲ್ಲಾ ನಾಗರಿಕರು, ಸಂಸ್ಥೆಗಳು, ಘಟಕಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶವಿದ್ದು, ಜುಲೈ 9 ರಂದು ಸ್ಪರ್ಧೆ ಕೊನೆಗೊಳ್ಳಲಿದೆ.
ಕೇಂದ್ರ ಸಚಿವಾಲಯ 800 ಕೋಟಿ ವೆಚ್ಚದಲ್ಲಿ ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ನ 650 ಶಾಖೆಗಳನ್ನು ಸೆಪ್ಟೆಂಬರ್ 2017ರ ಒಳಗೆ ನಿರ್ಮಿಸುವ ಪ್ರಸ್ತಾಪಕ್ಕೆ ಈಗಾಗಲೇ ಒಪ್ಪಿಗೆ ನೀಡಿದೆ. ನಂತರ 2018ರ ಒಳಗೆ ಭಾರತದಾದ್ಯಂತ ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ ಸ್ಥಾಪಿಸಲಿದೆ.
20 ಜನ ತಜ್ಞರು ವಿನ್ಯಾಸಕಾರರ ವಿನ್ಯಾಸವನ್ನು MyGov ವೆಬ್ಸೈಟ್ನಲ್ಲಿ ಮತದಾನದ ಮೂಲಕ ಆಯ್ಕೆ ಮಾಡಿ ವಿಜೇತರನ್ನು ಆಯ್ಕೆ ಮಾಡಲಾಗುವುದು ಎಂದು ಇಲಾಖೆ ಹೇಳಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.