ಕೋಝಿಕೋಡ್: ಕೋಝಿಕೋಡ್ ಜಿಲ್ಲಾಧಿಕಾರಿ ಎನ್ ಪ್ರಶಾಂತ್ ಹೃದಯ ವೈಶಾಲ್ಯತೆ ಮೆರೆದು ಮತ್ತೆ ಸಾಮಾಜಿಕ ಜಾಲತಾಣಗಳಲ್ಲಿ ಜನರ ಶ್ಲಾಘನೆಗೆ ಪಾತ್ರರಾಗಿದ್ದಾರೆ.
ಮಲಪರಂಬ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯನ್ನು ಸುಪ್ರೀಂ ಕೋರ್ಟ್ ಆದೇಶದ ಅನ್ವಯ ಬೀಗ ಜಡಿಯಲಾಗಿದ್ದು, ಜಿಲ್ಲಾಧಿಕಾರಿ ಎನ್. ಪ್ರಶಾಂತ್ ಅವರು ತಮ್ಮ ಕಚೇರಿಯ ಕಾಂಫರೆನ್ಸ್ ಹಾಲ್ನಲ್ಲಿ ಪಾಠ ಹೇಳಿ ಕೊಡಲು ಅವಕಾಶ ಕಲ್ಪಿಸಿದ್ದಾರೆ.
ಮಕ್ಕಳು ಮಾತ್ರವಲ್ಲದೇ ಶಾಲಾ ಸಿಬ್ಬಂದಿ, ಶಿಕ್ಷರಿಗೂ ತಮ್ಮ ಕರ್ತವ್ಯ ನಿಭಾಯಿಸಲು ಅವಕಾಶ ನೀಡಲಾಗಿದ್ದು, ಮಧ್ಯಾಹ್ನದ ಓಟದ ವ್ಯವಸ್ಥೆಯನ್ನೂ ಮಾಡಲಾಗಿದೆ. ಶಾಲೆ ಪುನರಾರಂಭವಾಗುವವರೆಗೆ ಈ ವ್ಯವಸ್ಥೆ ಒದಗಿಸಲಾಗಿದೆ.
ಬಡ ಕುಟುಂಬದವರಿಗೆ ಕಡಿಮೆ ದರದಲ್ಲಿ ಊಟದ ಕೂಪನ್ ಒದಗಿಸುವ ಮೂಲಕ ಈ ಹಿಂದೆಯೂ ಪ್ರಶಾಂತ್ ಅವರು ಸಮಾಜಿಕ ಜಾಲತಾಣಗಳಲ್ಲಿ ಜನರ ಶ್ಲಾಘನೆಗೆ ಪಾತ್ರರಾಗಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.