ನವದೆಹಲಿ: ಕಳೆದ 8 ವರ್ಷದಲ್ಲಿ ಏಡ್ಸ್ ಸಂಬಂಧಿತ ಸಾವಿನ ಸಂಖ್ಯೆ ಶೇ.55ರಷ್ಟು ಇಳಿಕೆಯಾಗಿದೆ. 2000-2015ರ ನಡುವೆ ಹೊಸ ಎಚ್ಐವಿ ಸೋಂಕುಗಳ ಪ್ರಮಾಣ ಶೇ. 66ರಷ್ಟು ಇಳಿಕೆಯಾಗಿದೆ ಎಂದು ಆರೋಗ್ಯ ಸಚಿವ ಜೆ.ಪಿ. ನಡ್ಡಾ ಹೇಳಿದ್ದಾರೆ.
ಅಮೇರಿಕಾದ ನ್ಯೂಯಾರ್ಕ್ನಲ್ಲಿ ನಡೆಯುತ್ತಿರುವ ಉನ್ನತ ಮಟ್ಟದ ಸಭೆಯಲ್ಲಿ ಭಾಗವಹಿಸಿರುವ ಸಚಿವ ನಡ್ಡಾ ಅವರು, ಭಾರತದಲ್ಲಿ 2007ರಲ್ಲಿ ಏಡ್ಸ್ ಸಂಬಂಧಿತ ಸಾವಿನ ಸಂಖ್ಯೆ 1,48,309 ಇದ್ದು, 2015ರಲ್ಲಿ ಇದರ ಸಂಖ್ಯೆ 67,600ಕ್ಕೆ ಇಳಿದಿದೆ. ಎಚ್ಐವಿಯಿಂದ ಉದ್ಭಿಸುವ ಹೊಸ ಸೋಕು 2.51 ಲಕ್ಷದಿಂದ 86,000ಕ್ಕೆ ಇಳಿದಿದೆ. ಜಾಗತಿಕವಾಗಿ ಏಡ್ಸ್ ಸಾವಿನ ಸಂಖ್ಯೆ ಶೇ.41ರಷ್ಟು ಹಾಗೂ ಎಚ್ಐವಿ ಸೋಂಕು ಶೇ.35ರಷ್ಟು ಇಳಿಕೆಯಾಗಿದೆ ಎಂದು ಜೆ.ಪಿ. ನಡ್ಡಾ ಹೇಳಿದ್ದಾರೆ.
ವಿಶ್ವಸಂಸ್ಥೆ ಏಡ್ಸ್ನ್ನು ನಿಯಂತ್ರಿಸಿ 2030ರ ಒಳಗೆ ಕೊನೆಗೊಳಿಸುವ ಯೋಜನೆಗಳ ತ್ವರಿತ ಅನುಷ್ಠಾನಕ್ಕೆ ಪ್ರಸ್ತಾಪಿಸಿದೆ. ಎಲ್ಲಾ ರಾಷ್ಟ್ರಗಳು ಸಹಯೋಗದೊಂದಿಗೆ ಕಾರ್ಯ ನಿರ್ವಹಿಸಿ ಏಡ್ಸ್ ನಿರ್ಮೂಲನೆ ಗುರಿಯನ್ನು ಸಾಧಿಸಬೇಕು.
ವಿಶ್ವದಾದ್ಯಂತ ಏಡ್ಸ್ ಔಷಧಗಳು ದೊರೆಯುವಂತೆ ಮಾಡುವ ಹಾಗೂ ಭಾರತದಲ್ಲೂ ಇದು ದೊರೆಯುವಂತೆ ಮಾಡುವಲ್ಲಿ ವಿಶ್ವಸಂಸ್ಥೆ ಪ್ರಯತ್ನಿಸಬೇಕು ಎಂದು ಜೆ.ಪಿ. ನಡ್ಡಾ ಹೇಳಿದ್ದಾರೆ.
ಭಾರತದ ಸಂಸ್ಥೆಗಳಾದ ಸಿಪ್ಲಾ ಹಾಗೂ ಡಾ ರೆಡ್ಡಿಸ್ ಲೆಬೋರೇಟರೀಸ್ ವಿಶ್ವದಾದದ್ಯಂತ ದೊರೆಯುವ ಶೇ.80ರಷ್ಟು ಔಷಧಿಗಳನ್ನು ಸರಬರಾಜು ಮಾಡುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.