ನವದೆಹಲಿ: ಗೋಧಿ ಮತ್ತಿತರ ಆಹಾರ ಧಾನ್ಯಗಳ ಶೇಖರಣೆಗೆ 80 ಕೋಟಿ ವೆಚ್ಚದ ಸಂಗ್ರಹಾಗಾರ ನಿರ್ಮಾಣಕ್ಕೆ ಭಾರತೀಯ ಆಹಾರ ನಿಗಮ (ಎಫ್ಸಿಐ) ಹಾಗೂ ಅದಾನಿ ಗ್ರೂಪ್ ಒಪ್ಪಂದ ಮಾಡಿದೆ.
ಅದಾನಿ ಲಾಜಿಸ್ಟಿಕ್ಸ್ ಪಂಜಾಬ್ನ ಕೋಟ್ಕಾಪುರ ಹಾಗೂ ಬಿಹಾರದ ಕತಿಹಾರ್ನಲ್ಲಿ ೨ ಸಂಗ್ರಹಾಗಾರಗಳನ್ನು ಮುಂದಿನ 2 ವರ್ಷಗಳಲ್ಲಿ ನಿರ್ಮಿಸಲಿದೆ. ಕೋಟ್ಕಾಪುರದ 25,000 ಟನ್ ಆಹಾರ ಸಂಗ್ರಾಗಾರ 35 ಕೋಟಿ ರೂ. ವೆಚ್ಚದಲ್ಲಿ ಹಾಗೂ ಕತಿಹಾರ್ನ 50,000 ಟನ್ ಆಹಾರ ಸಂಗ್ರಹಾಗಾರ 45 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಲಿದೆ ಎಂದು ಹಿರಿಯ ಸರ್ಕಾರಿ ಅಧಿಕಾರಿಗಳು ತಿಳಿಸಿದ್ದಾರೆ.
ಎಫ್ಸಿಐ ಒಡೆತನದ ಸಂಗ್ರಹಾಗಾರದ ವಿನ್ಯಾಸ, ಆರ್ಥಿಕತೆ, ನಿರ್ವಹಣೆಯನ್ನು ಅದಾನಿ ಗ್ರೂಪ್ ನಿರ್ವಹಿಸಲಿದೆ.
ದೊಡ್ಡ ಗಾತ್ರದ ಸಿಲಿಂಡರ್ ಆಕಾರದ ಪ್ರತಿ ತೊಟ್ಟಿಗಳು 12,500 ಟನ್ ಧಾನ್ಯಗಳನ್ನು ದೀರ್ಘ ಕಾಲ ಸಂಗ್ರಹಿಸುವ ಸಾಮರ್ಥ್ಯ ಹೊಂದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.