ಆಪ್ಘಾನಿಸ್ಥಾನ : ಆಪ್ಘಾನಿಸ್ಥಾನದ ಅಂತರಾಷ್ಟ್ರೀಯ ಎನ್ಜಿಓದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕಲ್ಕತ್ತಾ ಮೂಲದ ಜುಡಿತ್ ಡಿ’ಸೋಜಾ ಅವರನ್ನು ಕಾಬೂಲ್ನಿಂದ ಅಪಹರಿಸಲಾಗಿದೆ ಎನ್ನಲಾಗುತ್ತಿದೆ.
ಆಪ್ಘಾನಿಸ್ಥಾನದ ಮೂಲಗಳ ಪ್ರಕಾರ ಜುಡಿತ್ ಡಿ’ಸೋಜಾ ಅಘಾ ಖಾನ್ ಡೆವಲಪ್ಮೆಂಟ್ ನೆಟ್ವರ್ಕ್ಸ್ ಇಲ್ಲಿ ಕೆಲಸಮಾಡುತ್ತಿದ್ದರು. ಟಿವಿ ವರದಿಗಾರ್ತಿ ಅಪಹರಣಗೊಂಡ ಮಹಿಳೆ ಜುಡಿತ್ ಡಿ’ಸೋಜಾ ಎಂದು ಗುರುತಿಸಿದ್ದಾರೆ.
40 ವರ್ಷದ ಜುಡಿತ್ ಡಿ’ಸೋಜಾ ಕಲ್ಕತ್ತಾ ಮೂಲದವರೆಂದು ಹೇಳಲಾಗುತ್ತಿದೆ. ಅಪಹರಣಗೊಂಡ ಅವರನ್ನು ಬಿಡಿಸಲು ಮತ್ತು ಸುರಕ್ಷಿತವಾಗಿ ಕರೆತರಲು ಆಪ್ಘಾನಿಸ್ಥಾನ ಸರಕಾರ ಕಾರ್ಯಾಚರಿಸುತ್ತಿದೆ.
ಭಾರತೀಯ ರಾಯಭಾರ ಕಛೇರಿ ಮತ್ತು ಆಪ್ಘಾನಿಸ್ಥಾನ ಸರಕಾರದೊಂದಿಗೆ ನಿರಂತರ ಸಂಪರ್ಕದಲ್ಲಿದೆ. ಸರಕಾರ ಅವರ ಕುಟುಂಬಿಕರೊಂದಿಗೆ ನಿರಂತರ ಸಂಪರ್ಕದಲ್ಲಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.