ನವದೆಹಲಿ: ಎನ್ಎಸ್ಜಿ ಸದಸ್ಯತ್ವ ಪಡೆಯಲು ಪ್ರಧಾನಿ ನರೇಂದ್ರ ಮೋದಿ ನಡೆಸುತ್ತಿರುವ ಅವಿರತ ಪ್ರಯತ್ನಗಳು ನಿಧಾನವಾಗಿಯಾದರೂ ಫಲ ನೀಡುತ್ತಿರುವಂತೆ ಕಂಡು ಬರುತ್ತಿದೆ. ಭಾರತಕ್ಕೆ ಸದಸ್ಯತ್ವ ನೀಡುವುದಕ್ಕೆ ಚೀನಾ ಪ್ರಬಲ ವಿರೋಧ ವ್ಯಕ್ತಪಡಿಸುತ್ತಿದ್ದರೂ ಹಲವು ಎನ್ಎಸ್ಜಿ ರಾಷ್ಟ್ರಗಳು ಭಾರತಕ್ಕೆ ಬೆಂಬಲ ನೀಡಲು ಮುಂದಾಗಿದೆ.
48 ದೇಶಗಳ ಎನ್ಎಸ್ಜಿ ಕ್ಲಬ್ಗೆ ಭಾರತ ಸೇರ್ಪಡೆಗೊಳ್ಳುವುದಕ್ಕೆ ಅಮೆರಿಕಾ, ಸ್ವಿಟ್ಜರ್ಲ್ಯಾಂಡ್, ಮೆಕ್ಸಿಕೋ ದೇಶಗಳು ಬೆಂಬಲವನ್ನು ಘೋಷಿಸಿವೆ. ಈ ರಾಷ್ಟ್ರಗಳ ಬೆಂಬಲ ಭಾರತಕ್ಕೆ ಅತೀ ದೊಡ್ಡ ಸ್ಥೈರ್ಯವನ್ನು ತುಂಬಿದೆ.
ಇನ್ನು ಟರ್ಕಿ, ನ್ಯೂಜಿಲ್ಯಾಂಡ್, ಐರ್ಲೆಂಡ್, ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ ದೇಶಗಳು ಚೀನಾವನ್ನು ಬೆಂಬಲಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಎನ್ಎಸ್ಜಿ ನ್ಯೂಕ್ಲಿಯರ್ ವಲಯದಲ್ಲಿ ಅತ್ಯಂತ ಮಹತ್ವದ್ದಾಗಿದ್ದು, ಇದರ ಸದಸ್ಯರುಗಳಿಗೆ ನ್ಯೂಕ್ಲಿಯರ್ ತಂತ್ರಜ್ಞಾನ ವ್ಯಾಪಾರ ಮತ್ತು ರಫ್ತು ಮಾಡುವ ಅವಕಾಶ ದೊರೆಯುತ್ತದೆ. ಇದರ ಸದಸ್ಯತ್ವ ಪಡೆದರೆ ಭಾರತಕ್ಕೆ ತನ್ನ ಅಟೋಮಿಕ್ ಎನರ್ಜಿಯನ್ನು ವಿಸ್ತರಿಸಲು ಅವಕಾಶ ದೊರೆಯುತ್ತದೆ.
ಇನ್ನೊಂದೆಡೆ ಪಾಕಿಸ್ಥಾನ ತನಗೂ ಎನ್ಎಸ್ಜಿ ಸದಸ್ಯತ್ವ ಪಡೆಯಲು ಬೆಂಬಲ ನೀಡುವಂತೆ ಅಮೆರಿಕಾಗೆ ಮನವಿ ಮಾಡಿದೆ. ಈ ಬಗ್ಗೆ ಯಾವ ಪ್ರತಿಕ್ರಿಯೆಯನ್ನೂ ಅಮೆರಿಕಾ ನೀಡಿಲ್ಲ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.