ನವದೆಹಲಿ: ವಸತಿ ಯೋಜನೆ ಅಡಿಯಲ್ಲಿ ಕಟ್ಟಡಗಳ ಖರೀದಿದಾರರು ಮತ್ತು ಬಿಲ್ಡರ್ಗಳ ನಡುವಿನ ಒಪ್ಪಂದಗಳಿಗೆ ಸಂಬಂಧಿಸಿದಂತೆ ನಿರ್ಮಾಣ ಹಂತದಲ್ಲಿರುವ ಫ್ಲಾಟ್ಗಳಿಗೆ ಸೇವಾ ತೆರಿಗೆ ಹೇರದಂತೆ ದೆಹಲಿ ಹೈಕೋರ್ಟ್ ಆದೇಶ ಹೊರಡಿಸಿದೆ.
ನ್ಯಾ. ಎಸ್ ಮುರಳೀಧರ್ ಮತ್ತು ನ್ಯಾ ವಿಭು ಬಖ್ರು ಅವರನ್ನೊಳಗೊಂಡ ನ್ಯಾಯಪೀಠ ಈ ಆದೇಶ ಹೊರಡಿಸಿದೆ. ಆದರೆ ಗ್ರಾಹಕರು ತಮ್ಮ ಆದ್ಯತೆಯಂತೆ ಫ್ಲಾಟ್ಗಳನ್ನು ಖರೀದಿಸಲ್ಲಿ, ಪಾರ್ಕಿಂಗ್ ಸ್ಥಳವನ್ನು ಬದಲಿಸಿದಲ್ಲಿ ಸೇವಾ ತೆರಿಗೆಯನ್ನು ಹೇರಬಹುದು ಎಂದು ಹೇಳಿದೆ.
ಉತ್ತರಪ್ರದೇಶದ ನೋಯ್ಡಾದಲ್ಲಿ ಎಂ/ಎಸ್. ಸೇಠಿ ಬಿಲ್ಡ್ವೆಲ್ ಪ್ರೈ.ಲಿ. ಹಾಗೂ ಖರೀದಿದಾರರ ಜೊತೆಗಿನ ಪ್ರತ್ಯೇಕ ಒಪ್ಪಂದಕ್ಕೆ ಸಂಬಂಧಿಸಿದಂತೆ ಹಲವರು ನೀಡಿದ ಅರ್ಜಿ ವಿಚಾರಣೆ ವೇಳೆ ನ್ಯಾಯಪೀಠ ಈ ಆದೇಶ ಹೊರಡಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.