ನವದೆಹಲಿ: ಸಂವಹನ ಮತ್ತು ಕೆಲವು ಪ್ರತ್ಯೇಕ ಸೇವೆಗಳನ್ನು ಪಡೆಯಬಹುದಾದ ವಿಶಿಷ್ಟ ಫೋನ್ ನಿರ್ಮಿಸುತ್ತಿರುವ ವಿಶ್ವದ 10 ಮಂದಿ ಫೋನ್ ತಯಾರಕರಲ್ಲಿ ಭಾರತದ ಉಮೇಶ್ ಸಚ್ದೇವ್ ಒಬ್ಬರಾಗಿದ್ದಾರೆ.
ಯಾವುದೇ ಭಾಷೆಯನ್ನು ತಿಳಿದುಕಳ್ಳಬಹುದಾದ ಫೋನ್ ನಿರ್ಮಿಸುತ್ತಿರುವ ಟೈಮ್ ಮ್ಯಾಗಜಿನ್ನ ೨೦೧೬ರ 10 ಮಂದಿಯ ಲಿಸ್ಟ್ನಲ್ಲಿ ಉಮೇಶ್ ಸಚ್ದೇವ್ ಕೂಡ ಸ್ಥಾನ ಪಡೆದಿದ್ದಾರೆ. ಅವರು ತಮ್ಮ ಸ್ನೇಹಿತ ರವಿ ಸರಯೋಗಿ ಜೊತೆಗೂಡಿ ಯುನಿಫಾರ್ ಸಾಫ್ಟ್ವೇರ್ ಸಿಸ್ಟಮ್ ಕಂಡು ಹಿಡಿದಿದ್ದಾರೆ.
ಈ ಸ್ಮಾರ್ಟ್ಫೋನ್ಗಳು ಆನ್ಲೈನ್ ಬ್ಯಾಂಕಿಂಗ್ ಅಲ್ಲದೇ ರೈತರಿಗೆ ಹವಾಮಾನದ ಮಾಹಿತಿ ನೀಡಲಿದೆ. ಈ ಪೋನ್ ಗ್ರಾಮೀಣ ಭಾಷೆಗಳನ್ನು ಒಳಗೊಂಡಿದೆ.
ಚೆನ್ನೈ ಮೂಲದ ಸ್ಟಾರ್ಟ್ಅಪ್ ಯುನಿಫಾರ್ನ ಸಾಫ್ಟ್ವೇರ್ 25 ಜಾಗತಿಕ ಭಾಷೆಗಳು, 150 ಭಾರತೀಯ ಭಾಷೆಗಳು, ಉಪಭಾಷೆಗಳನ್ನು ಹೊಂದಿದ್ದು, ಐದು ಮಿಲಿಯನ್ ಭಾರತೀಯರು ಈ ಸಾಫ್ಟ್ವೇರ್ ಬಳಸುತ್ತಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.