ಚೆನ್ನೈ : ಅಂತಿಮ ವರ್ಷ ವೈದ್ಯಕೀಯ ಪದವಿ ಮಾಡುತ್ತಿದ್ದ ಚೆನ್ನೈ ಮೂಲದ 22 ವರ್ಷದ ಯುವಕ ಸಂತೋಷ್ ಎಂಬುವವರು ಹೇರ್ ಟ್ರಾನ್ಸ್ಪ್ಲಾಂಟ್ ಸರ್ಜರಿಗೆ ಒಳಗಾದ ಬಳಿಕ ಮೃತಪಟ್ಟಿದ್ದಾರೆ.
ಬೋಳು ತಲೆ ಹೊಂದಿದ್ದ ಸಂತೋಷ್ ಕಳೆದ ತಿಂಗಳು ಖಾಸಗಿ ಆಸ್ಪತ್ರೆಯೊಂದರಲ್ಲಿ 73ಸಾವಿರ ರೂಪಾಯಿ ಕಟ್ಟಿ ಹೇರ್ ಟ್ರಾನ್ಸ್ಪ್ಲಾಂಟ್ ಸರ್ಜರಿಗೆ ಒಳಗಾಗಿದ್ದರು. ಆದರೆ ಸರ್ಜರಿ ನಡೆದು ಎರಡು ದಿನಗಳ ಬಳಿಕ ಅವರು ಮೃತರಾಗಿದ್ದಾರೆ.
1,200 ಕೂದಲನ್ನು ಇವರಿಗೆ ಜೋಡಿಸಲಾಗಿತ್ತು, ಸರ್ಜರಿ ನಡೆದ ೧೦ ಗಂಟೆಯಲ್ಲಿ ತೀವ್ರ ಜ್ವರದಿಂದ ಬಳಲಿದ ಅವರು ಬಳಿಕ ಮೃತಪಟ್ಟರು ಎಂದು ಸಂತೋಷ್ ಅವರ ತಾಯಿ ನಸ್ ಆಗಿರುವ ಪಿ.ಜೋಸ್ಬೀನ್ ಹೇಳಿದ್ದಾರೆ.
ಇವರಿಗೆ ಸರ್ಜರಿ ನಡೆಸಿದ ವೈದ್ಯರು ಸರ್ಜನ್ಗಳಲ್ಲ, ಅಲ್ಲದೇ ಇವರಿಗೆ ನೀಡಲಾದ ಅನೆಸ್ತೇಷಿಯಾದ ಪ್ರಭಾವದಿಂದ ಜ್ವರ ಬಂದಿದೆ ಎನ್ನಲಾಗಿದೆ. ಇದೀಗ ಇಬ್ಬರೂ ವೈದ್ಯರು ನಾಪತ್ತೆಯಾಗಿದ್ದಾರೆ.
ಇದೀಗ ಆಸ್ಪತ್ರೆಯ ಮೇಲೆ ದಾಳಿ ನಡೆಸಿ ಔಷಧಿಗಳ ಸಂಗ್ರಹವನ್ನು ವಶಪಡಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.