ಮೆಕ್ಸಿಕೋ: ಪರಮಾಣು ಪೂರೈಕಾ ರಾಷ್ಟ್ರಗಳ ಪಟ್ಟಿಗೆ ಸೇರ್ಪಡೆಗೊಳ್ಳುವ ಪ್ರಯತ್ನದಲ್ಲಿರುವ ಭಾರತಕ್ಕೆ ಮೆಕ್ಸಿಕೋದ ಸಂಪೂರ್ಣ ಬೆಂಬಲ ದೊರೆತಿದೆ.
ಬುಧವಾರ ಮೆಕ್ಸಿಕೋಗೆ ಬಂದಿಳಿದ ಪ್ರಧಾನಿ ನರೇಂದ್ರ ಮೋದಿಯವರನ್ನು ಆತ್ಮೀಯವಾಗಿ ಬರಮಾಡಿಕೊಂಡ ಅಲ್ಲಿನ ಅಧ್ಯಕ್ಷ ಎನ್ರಿಕ್ ಪೆನ ನಿಟೋ ಅವರು, ಎನ್ಎಸ್ಜಿಗೆ ಭಾರತ ಸೇರ್ಪಡೆಗೊಳ್ಳುವುದಕ್ಕೆ ತಮ್ಮ ಬೆಂಬಲವಿರುವುದಾಗಿ ಘೋಷಿಸಿದರು.
’ಮೆಕ್ಸಿಕೋ ಸಕಾರಾತ್ಮಕವಾಗಿ ಮತ್ತು ಬಲವಾಗಿ ಎನ್ಎಸ್ಜಿಯಲ್ಲಿ ಭಾರತ ಸದಸ್ಯತ್ವ ಪಡೆಯುವುದಕ್ಕೆ ಬೆಂಬಲ ನೀಡುತ್ತದೆ’ ಎಂದು ಎನ್ರಿಕ್ ಅವರು ಮೋದಿಯೊಂದಿಗೆ ಜಂಟಿ ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದ ವೇಳೆ ಹೇಳಿದರು.
ಮೆಕ್ಸಿಕೋದ ಈ ಸಹಕಾರಕ್ಕೆ ಮೋದಿ ಧನ್ಯವಾದ ಸಮರ್ಪಿಸಿದರು, ಮಾತ್ರವಲ್ಲ ಮೆಕ್ಸಿಕೋ ಇಂಧನ ಭದ್ರತೆಯಲ್ಲಿ ಭಾರತದ ಅತ್ಯುತ್ತಮ ಪಾಲುದಾರ ರಾಷ್ಟ್ರ ಎಂದು ಬಣ್ಣಿಸಿದರು.
ಅಮೆರಿಕಾವೂ ಭಾರತ ಎನ್ಎಸ್ಜಿ ಸದಸ್ಯತ್ವ ಪಡೆಯಲು ಬೆಂಬಲ ನೀಡುವುದಾಗಿ ತಿಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.