ನವದೆಹಲಿ: ಈ ಬಾರಿಯ ಯೋಗ ದಿನಾಚರಣೆಯಲ್ಲಿ ಸೂರ್ಯ ನಮಸ್ಕಾರ ಇರುವುದಿಲ್ಲ ಮತ್ತು ‘ಓಂ’ಕಾರ ಉಚ್ಚಾರಣೆಯೂ ಕಡ್ಡಾಯವಲ್ಲ. ಇವೆರಡು ಇಲ್ಲದ ಯೋಗ ಪರಿಪೂರ್ಣವಲ್ಲ ಎಂದು ತಿಳಿದಿದ್ದರೂ ಈ ಬಾರಿಯ ಯೋಗದಿಂದ ಇವುಗಳನ್ನು ದೂರವಿಟ್ಟಿದ್ದೇವೆ ಎಂದು ಆಯುಷ್ ಸಚಿವ ಶ್ರೀಪಾದ್ ನಾಯ್ಕ್ ತಿಳಿಸಿದ್ದಾರೆ.
ಜೂನ್ 21ರಂದು ಯೋಗ ದಿನಾಚರಣೆಯನ್ನು ಅಚರಣೆ ಮಾಡಲಾಗುತ್ತಿದೆ. ಕಳೆದ ವರ್ಷದಿಂದ ಇದು ಆರಂಭಗೊಂಡಿದೆ. ಕಳೆದ ಬಾರಿಯೂ ಸೂರ್ಯ ನಮಸ್ಕಾರವಿರಲಿಲ್ಲ. ಇದೊಂದು ಕ್ಲಿಷ್ಟ ವ್ಯಾಯಾಮವಾದ ಕಾರಣ ದೂರವಿಡಲಾಗಿತ್ತು.
ಇನ್ನೊಂದೆಡೆ ಮುಸ್ಲಿಂ ಸಮುದಾಯದ ಕೆಲವರು ಈ ಆಸನಗಳಿಗೆ ವಿರೋಧ ವ್ಯಕ್ತಪಡಿಸಿ, ಇಂತಹ ವ್ಯಾಯಾಮಕ್ಕೆ ನಮ್ಮ ಧರ್ಮದಲ್ಲಿ ಆಸ್ಪದವಿಲ್ಲ ಎಂದಿದ್ದರು. ಹೀಗಾಗಿ ವಿವಾದಗಳಿಂದ ದೂರವಿರಲು ಸೂರ್ಯ ನಮಸ್ಕಾರ ಮತ್ತು ‘ಓಂ’ಕಾರ ಉಚ್ಚಾರಣೆಯನ್ನು ಕಡ್ಡಾಯಗೊಳಿಸಲಾಗಿಲ್ಲ ಎನ್ನಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.