ವಾಷಿಂಗ್ಟನ್: ಪ್ರಧಾನಿ ನರೇಂದ್ರ ಮೋದಿ ಬುಧವಾರ ಯುಎಸ್ ಕಾಂಗ್ರೆಸ್ನ ಜಂಟಿ ಸದನವನ್ನು ಉದ್ದೇಶಿಸಿ ಮಾತನಾಡಿದರು. ಈ ವೇಳೆ ಅಮೆರಿಕಾ- ಭಾರತದ ಬೇರ್ಪಡಿಸಲಾಗದ ಪಾಲುದಾರ, ಬಲಿಷ್ಠ ಭಾರತ ಅಮೆರಿಕಾದ ಆಸಕ್ತಿಯಾಗಿದೆ ಎಂದು ಬಣ್ಣಿಸಿದರು.
45 ನಿಮಿಷಗಳ ಭಾಷಣದಲ್ಲಿ ಮೋದಿ ಭಾರತ-ಅಮೆರಿಕಾದ ಬಾಂಧವ್ಯ ವೃದ್ಧಿಯ ಎಲ್ಲಾ ಆಯಾಮಗಳ ಬಗ್ಗೆ ಮಾತನಾಡಿದರು. ಮೋದಿಯ ಮಾತನ್ನು ಅತ್ಯಂತ ಉತ್ಸುಹುಕದಿಂದ ಕೇಳಿದ ಯುಎಸ್ ಶಾಸಕರು ಅನೇಕ ಬಾರಿ ಚಿಯರ್ ಮಾಡುತ್ತಾ 60 ಕ್ಕೂ ಹೆಚ್ಚು ಬಾರಿ ಚಪ್ಪಾಳೆ ತಟ್ಟಿದ್ದಾರೆ. ಅದಲ್ಲದೆ ಎದ್ದು ನಿಂತು ಕರತಾಡನ ಮಾಡಿದ್ದಾರೆ.
ಉಗ್ರವಾದ ಭಾರತದ ನೆರೆಹೊರೆಯಲ್ಲೇ ಬೆಳೆಯುತ್ತಿದ್ದು, ದ್ವೇಷ, ಕೊಲೆ ಮತ್ತು ಹತ್ಯೆಯಲ್ಲಿ ನಂಬಿಕೆಯಿಟ್ಟಿರುವ ಲಷ್ಕರ್-ಇ-ತೊಯ್ಬಾ, ತಾಲಿಬಾನ್, ಇಸಿಸ್ ವಿರುದ್ಧ ಮುಲಾಜಿಲ್ಲದ ಕ್ರಮಕೈಗೊಳ್ಳಬೇಕಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಪ್ರತಿಪಾದಿಸಿದ್ದಾರೆ.
ಭಾರತದ ಬಲಿಷ್ಠ ಆರ್ಥಿಕತೆ ಮತ್ತು ಶೇ.7.6ರಷ್ಟಿರುವ ಪ್ರಗತಿಯ ದರ ಉಭಯ ದೇಶಗಳಲ್ಲಿ ಹೊಸ ಅವಕಾಶಗಳನ್ನು ತೆರೆಯುತ್ತಿದೆ. ಭಾರತದಲ್ಲಿ ಅಮೆರಿಕಾದ ತಂತ್ರಜ್ಞಾನಗಳ ಬಳಕೆ ಮತ್ತು ಭಾರತ ಉದ್ಯಮಿಗಳು ಅಮೆರಿಕಾದಲ್ಲಿ ಹೂಡಿಕೆ ಮಾಡುತ್ತಿರುವುದು ಎರಡೂ ದೇಶಗಳ ನಾಗರಿಕರಿಗೆ ಒಳಿತನ್ನು ಮಾಡಿದೆ ಎಂದರು.
ಅಮೆರಿಕಾ-ಭಾರತ ನಾಗರಿಕ ಪರಮಾಣು ಒಪ್ಪಂದಕ್ಕೆ 2008ರಲ್ಲಿ ಸಹಿ ಹಾಕಿದ್ದಕ್ಕಾಗಿ ಮೋದಿ ಅಮೆರಿಕಾಗೆ ಧನ್ಯವಾದಗಳನ್ನು ಸಲ್ಲಿಸಿದರು. ಇದೇ ವೇಳೆ ಅಮೆರಿಕಾದಲ್ಲಿ ಭಾರತೀಯ ಸಮುದಾಯ ಮಾಡುತ್ತಿರುವ ಸಾಧನೆಯನ್ನು ಶ್ಲಾಘಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.