ನವದೆಹಲಿ: ಅತೀ ಶೀಘ್ರದಲ್ಲಿ ರಾಷ್ಟ್ರ ರಾಜಧಾನಿ ಅಥವಾ ದೆಹಲಿ-ಎನ್ಸಿಆರ್ನಲ್ಲಿ ಪ್ರಯಾಣಿಸುವುದು ಹೈಟೆಕ್ ಟಚ್ ಪಡೆದುಕೊಳ್ಳಲಿದೆ.
ಕೇಂದ್ರ ಸರ್ಕಾರ 4 ಸಾವಿರ ಕೋಟಿ ವೆಚ್ಚದ ’ಮೆಟ್ರಿನೋ’ ಸಾರ್ವಜನಿಕ ಸಾರಿಗೆ ಯೋಜನೆಯನ್ನು ಜಾರಿಗೊಳಿಸಲು ಮುಂದಾಗಿದ್ದು, ಈ ಬಗ್ಗೆ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿಯವರು ಮಂಗಳವಾರ ಮಾಹಿತಿ ನೀಡಿದ್ದಾರೆ.
ಈ ಯೋಜನೆಯನ್ವಯ ಪ್ರಯಾಣಿಕರು ಚಾಲಕ ರಹಿತ ಪೋಡ್ಸ್ಗಳಲ್ಲಿ ರೋಪ್ವೇ ಮೂಲಕ ಚಾಲನೆ ಮಾಡಬಹುದಾಗಿದೆ. ಮುಂದಿನ ಎರಡು ತಿಂಗಳಲ್ಲಿ ಈ ಯೋಜನೆ ಆರಂಭಗೊಳ್ಳುವ ಸಾಧ್ಯತೆ ಇದೆ.
ಈ ಮೆಟ್ರಿನೋ ಪ್ರಾಜೆಕ್ಟ್ಗೆ ಸರ್ಕಾರ ನಾಲ್ಕು ಟೆಂಡರ್ಗಳನ್ನು ಸ್ವೀಕರಿಸಿದೆ, ಎರಡು ತಿಂಗಳಲ್ಲಿ ಕಾರ್ಯ ಆರಂಭಗೊಳ್ಳಲಿದೆ. ಮೊದಲ ಹಂತ ದೆಹಲಿಯ ದೌಲ್ ಕೌನ್ನಿಂದ ಹರಿಯಾಣದ ಮನ್ಸೀರ್ರವರೆಗೆ ಒಟ್ಟು 70 ಕಿ.ಮೀ ವ್ಯಾಪಿಸಲಿದೆ ಎಂದು ಗಡ್ಕರಿ ತಿಳಿಸಿದ್ದಾರೆ.
ಟ್ರಾಫಿಕ್ ಸಮಸ್ಯೆಯನ್ನು ಕಡಿಮೆ ಮಾಡಲೂ ಈ ಪೋಡ್ಸ್ಗಳು ಸಹಕಾರಿಯಾಗಲಿವೆ. ಪ್ರತಿ ಕಿ.ಮೀ ಮೆಟ್ರೋ ಸ್ಥಾಪನೆಗೆ 250 ಕೋಟಿ ತಗುಲಲಿದೆ. ಇದು ನೆಲದಿಂದ 5 ರಿಂದ 10 ಮೀಟರ್ ಎತ್ತರದಲ್ಲಿ ಇರಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.