ನವದೆಹಲಿ: ವಿಮಾನಗಳ ಟಿಕೆಟ್ ರದ್ದತಿ ವೆಚ್ಚ ಮೂಲ ಬೆಲೆಯನ್ನು ಮೀರಬಾರದು ಎಂದು ವಿಮಾನಯಾನ ಪ್ರಧಾನ ನಿರ್ದೇಶಕ ಏರ್ಲೈನ್ಸ್ ಫ್ಲೈಟ್ಗಳಿಗೆ ಆದೇಶಿಸಿದ್ದಾರೆ.
ಗ್ರಾಹಕರು ಟಿಕೆಟ್ ರದ್ದುಗೊಳಿಸಿದ ಸಂದರ್ಭದಲ್ಲಿ ಸರ್ವಿಸ್ ಟ್ಯಾಕ್ಸ್ ಸೇರಿದಂತೆ ಇತರ ಏರ್ಪೋರ್ಟ್ ದರಗಳನ್ನು ಅವರಿಗೆ ವಾಪಾಸ್ ಮಾಡಬೇಕು ಎಂದು ಏರ್ಲೈನ್ಗಳಿಗೆ ಕಟ್ಟಪ್ಪಣೆ ಮಾಡಲಾಗಿದೆ. ಅಲ್ಲದೇ ಬುಕ್ಕಿಂಗ್ ಸೈಟ್ ಚಾಜ್ಗಳನ್ನೂ ಮಿತಿಯೊಳಗೆಯೇ ಪಡೆಯಬೇಕು ಎಂದು ತಿಳಿಸಲಾಗಿದೆ.
ಈ ನೂತನ ನಿಯಮದ ಬಗ್ಗೆ ಈಗಾಗಲೇ ಏರ್ಲೈನ್ಸ್ಗಳೊಂದಿಗೆ ಚರ್ಚೆಗಳು ನಡೆದಿವೆ. ಇಂಡಿಗೋ ಏರ್ಲೈನ್ ಎಪ್ರಿಲ್ನಿಂದಲೇ ಟಿಕೆಟ್ ರದ್ದು ದರವನ್ನು 2 ಸಾವಿರ ನಿಗದಿ ಮಾಡಿದೆ. ಫೆಬ್ರವರಿಯಲ್ಲಿ ಏರ್ ಇಂಡಿಯಾ ದರವನ್ನು 500 ರೂಪಾಯಿ ಮಾಡಿದೆ.
ವಿಮಾನಯಾನ ಸಚಿವಾಲಯ ನೂತ ಬ್ಯಾಗೇಜ್ ಮತ್ತು ಬೋರ್ಡಿಂಗ್ ನಿಯಮಗಳನ್ನು ಘೋಷಣೆ ಮಾಡುವ ಸಾಧ್ಯತೆ ಇದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.