ನವದೆಹಲಿ: ಪಂಜಾಬ್ ರಾಜ್ಯವನ್ನು ವ್ಯಾಪಿಸಿರುವ ಡ್ರಗ್ಸ್ ಮಾಫಿಯಾದ ಬಗೆಗಿನ ಚಿತ್ರಣವನ್ನು ನೀಡುವ ಬಾಲಿವುಡ್ ಸಿನಿಮಾ ’ಉಡ್ತಾ ಪಂಜಾಬ್’ ಇದೀಗ ವಿವಾದಗಳ ಸುಳಿಯಲ್ಲಿ ಸಿಲುಕಿದೆ. ಸೆನ್ಸಾರ್ ಮಂಡಳಿ ಇದಕ್ಕೆ 80 ಕ್ಕೂ ಅಧಿಕ ಕತ್ತರಿಗಳನ್ನು ಹಾಕಿದ್ದು ಸಿನಿಮಾ ವಲಯದ ಆಕ್ರೋಶಕ್ಕೆ ಕಾರಣವಾಗಿದೆ.
ಈ ವಾದ-ವಿವಾದಗಳು ಇದೀಗ ರಾಜಕೀಯ ಬಣ್ಣವನ್ನು ಪಡೆಯುತ್ತಿದೆ. ಚಿತ್ರದ ನಿರ್ದೇಶಕ ಅನುರಾಗ್ ಕಶ್ಯಪ್ ಅವರು ಪಂಜಾಬ್ನ್ನು ಕೆಟ್ಟದಾಗಿ ಚಿತ್ರಿಸಲು ಆಮ್ ಆದ್ಮಿ ಪಕ್ಷದಿಂದ ಹಣ ಪಡೆದಿದ್ದಾರೆ ಎಂದು ಸೆನ್ಸಾರ್ ಬೋರ್ಡ್ ಅಧ್ಯಕ್ಷ ಪಹ್ಲಜ್ ನಿಹಲಾನಿ ಆರೋಪಿಸಿದ್ದಾರೆ.
ಇನ್ನೊಂದೆಡೆ ಪಂಜಾಬ್ ರಾಜಕಾರಣಿಗಳ ಕುತಂತ್ರಕ್ಕೆ ಮಣಿದು ಸೆನ್ಸಾರ್ ಮಂಡಳಿ ಸಿನಿಮಾಗೆ ಕತ್ತರಿ ಪ್ರಯೋಗ ಮಾಡಿದೆ ಎನ್ನಲಾಗುತ್ತಿದೆ. ಕೆಲವರು ಸಿನಿಮಾ ಟೈಟಲ್ನಿಂದ ಪಂಜಾಬ್ನ್ನು ತೆಗೆಯಬೇಕು ಎಂದು ಹೇಳಿದ್ದಾರೆ.
ಕರೀನಾ ಕಪೂರ್, ಆಲಿಯಾ ಭಟ್, ಶಾಹೀದ್ ಕಪೂರ್ ಹೀಗೆ ದೊಡ್ಡ ತಾರಾಗಣವೇ ಉಡ್ತಾ ಪಂಜಾಬ್ನಲ್ಲಿದ್ದು, ಪಂಜಾಬ್ನ ಡ್ರಗ್ಸ್ ನಶೆಯನ್ನು ಇದರಲ್ಲಿ ತೋರಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.