ನವದೆಹಲಿ: ಭಾರತದ ರೇಡಿಯೋ ಪ್ರಸಾರಕ ಆಲ್ ಇಂಡಿಯಾ ರೇಡಿಯೋ (ಎಐಆರ್) 80ನೇ ವರ್ಷಕ್ಕೆ ಕಾಲಿರಿಸಿದೆ. ಇಂಡಿಯನ್ ಸ್ಟೇಟ್ ಬ್ರಾಡ್ಕಾಸ್ಟಿಂಗ್ ಸರ್ವಿಸ್ ಹೆಸರಿನಲ್ಲಿ ಆರಂಭಗೊಂಡ ರೇಡಿಯೋ ಚಾನೆಲ್, ಜೂನ್ 8, 1936ರಂದು ’ಆಲ್ ಇಂಡಿಯಾ ರೇಡಿಯೋ’ ಎಂದು ಮರುನಾಮಕರಣ ಮಾಡಲಾಯಿತು. ಎಐಆರ್ ವಿಶ್ವದಲ್ಲೇ ಅತೀ ದೊಡ್ಡ ನೆಟ್ವರ್ಕ್ ಹೊಂದಿದೆ.
ಜುಲೈ 1, 1923ರಲ್ಲಿ ಇಂಡಿಯನ್ ಬ್ರಾಡ್ಕಾಸ್ಟಿಂಗ್ ಕಂಪೆನಿ ಲಿ. (ಐಬಿಸಿ)ನ ಮುಂಬಯಿ ಹಾಗೂ ಕೋಲ್ಕತಾದಲ್ಲಿ 2 ರೇಡಿಯೋ ಸ್ಟೇಷನ್ಗಳನ್ನು ನಡೆಸಲು ಕೇಂದ್ರ ಸರ್ಕಾರ ಅನುಮತಿ ನೀಡಿತ್ತು. ಇಂಡಿಯನ್ ಬ್ರಾಡ್ಕಾಸ್ಟಿಂಗ್ ಕಂಪೆನಿ ಲಿ. ರೇಡಿಯೋ ಚಾನೆಲ್ನ್ನು ತನ್ನ ಅಧೀನಕ್ಕೆ ಪಡೆದುಕೊಂಡ ಸರ್ಕಾರ ಇಂಡಿಯನ್ ಸ್ಟೇಟ್ ಬ್ರಾಡ್ಕಾಸ್ಟಿಂಗ್ ಸರ್ವಿಸ್ ಹೆಸರಲ್ಲಿ 1930ರಲ್ಲಿ ನಡೆಸಲಾರಂಭಿಸಿತು.
ಎಂ.ವಿ. ಗೋಪಾಲಕೃಷ್ಣ 1956ರಲ್ಲಿ ಅವರು ’ಆಕಾಶವಾಣಿ’ ಎಂಬ ಹೆಸರನ್ನು ನೀಡಿದ್ದು, ಬಳಿಕ ಎಐಆರ್ ಆಗಿ ಬದಲಾಯಿಸಲಾಯಿತು. ಅಂದು ಎಐಆರ್ ಬಾಂಬೆ, ದೆಹಲಿ, ಕಲ್ಕತ್ತಾ, ಮದ್ರಾಸ್, ತಿರುಚಿ, ಲಕ್ನೌಗಳಲ್ಲಿ 6 ರೇಡಿಯೋ ಕೇಂದ್ರಗಳನ್ನು ಹೊಂದಿತ್ತು.
1947ರಲ್ಲಿ ಭಾರತದ ಶೇ. 2.5ರಷ್ಟು ಭಾಗಗಳಲ್ಲಿ ಆಕಾಶವಾಣಿ ಪ್ರಸಾರವಾಗುತ್ತಿದ್ದು, ಈಗ ಭಾರತದಾದ್ಯಂತ ಶೇ. 99ರಷ್ಟು ಭಾಗಗಳಲ್ಲಿ ಪ್ರಸಾರವಾಗುತ್ತಿದೆ ಎಂದು ವರದಿ ತಿಳಿಸಿದೆ. ಭಾರತದ ಮೊದಲ ವಾಣಿಜ್ಯ ಚಾನೆಲ್ ವಿವಿಧ್ ಭಾರತಿ ಅಕ್ಟೋಬರ್ 3, 1957ರಲ್ಲಿ ಪ್ರಾರಂಭಿಸಲಾಗಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.