ರಾಂಚಿ: ರಾಂಚಿ ರೈಲ್ವೆ ವಿಭಾಗ (ಅರ್ಆರ್ಡಿ) 2 ಗಂಟೆ 40 ನಿಮಿಷಗಳಲ್ಲಿ ರೈಲ್ವೆ ಅಂಡರ್ಪಾಸ್ (ಕೆಳರಸ್ತೆ) ನಿರ್ಮಿಸಿ ಈ ಹಿಂದಿನ ತನ್ನದೇ ದಾಖಲೆಯನ್ನು ಮುರಿದಿದೆ. ಈ ಅಂಡರ್ಪಾಸ್ನ್ನು ಕಾರ್ರಾ- ಗೋವಿಂದ್ಪುರ ನಡುವೆ ನಿರ್ಮಿಸಲಾಗಿದೆ.
ಈ ಹಿಂದೆ ರಾಂಚಿ ರೈಲ್ವೆ ವಿಭಾಗ ಲೋಧ್ಮಾ-ಕಾರ್ರಾ ರಸ್ತೆಯಲ್ಲಿ 3 ಗಂಟೆ 15 ನಿಮಿಷದಲ್ಲಿ ಅಂಡರ್ಪಾಸ್ ನಿರ್ಮಿಸಿ ದಾಖಲೆ ನಿರ್ಮಿಸಿತ್ತು.
ಇದರ ಅಂಡರ್ಪಾಸ್ ನಿರ್ಮಾಣಕ್ಕೆ 100 ಜನ ಕಾರ್ಮಿಕರು, ಮೂರು ಕ್ರೇನ್, ನಾಲ್ಕು ಜೆಸಿಬಿ, ನಾಲ್ಕು ಟ್ರಾಕ್ಟರ್ಗಳನ್ನು ಬಳಸಲಾಗಿದ್ದು, ಒಟ್ಟು 1.10 ಕೋಟಿ ರೂ. ಪಾವತಿಸಿದೆ.
ಅಂಡರ್ಪಾಸ್ ನಿರ್ಮಾಣಕ್ಕೆ ಇಂಜಿನಿಯರ್ಗಳಿಗೆ 4 ಗಂಟೆಗಳ ಗಡುವು ನೀಡಲಾಗಿದ್ದು, ಭಾನುವಾರ ಬೆಳಗ್ಗೆ 8.50ಕ್ಕೆ ಆರಂಭವಾಗಿ 11.30ಕ್ಕೆ ನಿರ್ಮಾಣ ಕಾರ್ಯ ಪೂರ್ಣಗೊಂಡಿತ್ತು.
ಈ ಅಂಡರ್ಪಾಸ್ ನಿರ್ಮಾಣದಿಂದ ಸುಮಾರು 10,000 ಜನರು ಇದರ ಲಾಭ ಪಡೆಯಲಿದ್ದು, ಇನ್ನೂ ಹಲವೆಡೆ 49 ಅಂಡರ್ಪಾಸ್ಗಳನ್ನು ನಿರ್ಮಿಸಲಾಗುವುದು ಎಂದು ಆರ್ಆರ್ಡಿ ಇಂಜಿನಿಯರ್ಗಳು ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.