ನವದೆಹಲಿ: ಹಿಮಾಚಲ ಪ್ರದೇಶ ರಸ್ತೆ ಸಾರಗೆ ಸಂಸ್ಥೆ (ಎಚ್ಆರ್ಟಿಸಿ) ದೆಹಲಿಯಿಂದ ಜಮ್ಮು ಕಾಶ್ಮೀರದ ಲೇಹ್ ನಡುವೆ ಬಸ್ ಸೇವೆಯನ್ನು ಪುನರಾರಂಭಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದೆಹಲಿ-ಲೇಹ್ ನಡುವೆ ಪ್ರತಿನಿತ್ಯದ ಬಸ್ ಸೇವೆ ಪ್ರಾರಂಭಿಸಲಾಗಿದ್ದು, ಬಸ್ಗಳು ಮನಾಲಿ ಮೂಲಕ ಸಂಚರಿಸಲಿವೆ. ಏಕದಿಕ್ಕಿನಲ್ಲಿ ಸಂಚರಿಸಲು ಬಸ್ ಪ್ರಯಾಣ ದರ ರೂ. 1,365 ಇರಲಿದೆ. ಸುಮಾರು 1,050 ಕಿ.ಮೀ. ದೂರ, ನಾಲ್ಕು ಪರ್ವತಗಳ ಕಣಿವೆಗಳಿಂದ ಸಾಗುವ 33 ಗಂಟೆ ಪ್ರಯಾಣದ ದೆಹಲಿ-ಲೇಹ್ ಮಾರ್ಗ ಅಕ್ಟೋಬರ್ನಿಂದ ಮೇ ತಿಂಗಳ ವರೆಗೆ ಮಂಜಿನಿಂದ ಕೂಡಿರುತ್ತದೆ ಇದರಿಂದಾಗಿ ಸಂಚಾರ ಸ್ಥಗಿತಗೊಳಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.
ಮನಾಲಿಯಿಂದ ಲೇಹ್ಗೆ ವಿಶೇಷ ಟ್ಯೂರಿಸ್ಟ್ ಬಸ್ ಪ್ರಾರಂಭಿಸಲಾಗಿದ್ದು, ಮನಾಲಿಯಿಂದ ಬೆಳಗ್ಗೆ 11 ಗಂಟೆಗೆ ಹೊರಡಲಿದ್ದು, ಮರುದಿನ ಸಂಜೆ ವೇಳೆಗೆ ಲೇಹ್ ತಲುಪಲಿದೆ. ಈ ಬಸ್ ರಾತ್ರಿ ವೇಳೆ ಲಾಹೌಲ್-ಸ್ಪಿತಿ ಜಿಲ್ಲೆಯ ಕೀಲಾಂಗ್ನಲ್ಲಿ ಹಾಲ್ಟ್ ಆಗಲಿದ್ದು, ಮರುದಿನ ಹೊರಡಲಿದೆ. ಏಕದಿಕ್ಕಿನಲ್ಲಿ ಸಂಚರಿಸಲು ಟ್ಯೂರಿಸ್ಟ್ ಬಸ್ನ ಪ್ರಯಾಣ ದರ 2,700 ಇರಲಿದ್ದು, ಇದು ರಾತ್ರಿ ವೇಳೆಯ ವಸತಿ ಹಾಗೂ ಊಟದ ದರವನ್ನು ಒಳಗೊಂಡಿರುತ್ತದೆ ಎಂದು ಹಿಮಾಚಲ ಪ್ರದೇಶ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ವಿಜಯ್ ಶರ್ಮಾ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.