ಗೌಹಾಟಿ : ಅಸ್ಸಾಂ ರಾಜಧಾನಿ ಕಾಮ್ರೂಪ್ದ ಜಿಲ್ಲಾಡಳಿತ ಡೊಲ್ಫಿನ್ಅನ್ನು ತನ್ನ ನಗರದ ಪ್ರಾಣಿಯನ್ನಾಗಿ ಫೋಷಿಸುವ ಮೂಲಕ ಭಾರತದ ಮೊದಲ ನಗರದ ಪ್ರಾಣಿಯನ್ನು ಫೋಷಿಸಿದ ಮಹಾನಗರ ಎಂದು ಕೀರ್ತಿಗೆ ಪಾತ್ರವಾಗಿದೆ.
ಕಾಮ್ರೂಪ್ನ ಜಿಲ್ಲಾ ಉಪಾಯುಕ್ತರಾದ ಎಂ ಅಂಗಮುತ್ತು ಡೊಲ್ಫಿನ್ ಅನ್ನು ನಗರದ ಕಾಮರೂಪ್ನ ಜಿಲ್ಲಾ ಪ್ರಾಣಿಯಾಗಿ ಘೋಷಿಸಿದ್ದು, ಇದನ್ನು ಸ್ಥಳೀಯವಾಗಿ ಸಿಹು ಎಂದು ಕರೆಯಲಾಗುತ್ತಿದೆ.
ವಿನಾಶದ ಅಂಚಿನಲ್ಲಿರುವ ಮೂರು ಜೀವಿಗಳನ್ನು ಜಿಲ್ಲಾಡಳಿತ ನಗರದ ಜೀವಿಯನ್ನಾಗಿ ಫೋಷಿಸಲು ಕಪ್ಪುಚಿಪ್ಪಿನ ಆಮೆ, ಕೊಕ್ಕರೆ, ಮತ್ತು ಡೊಲ್ಫಿನ್ಗಳನ್ನು ಜನರ ಮತಕ್ಕೆ ಹಾಕಲಾಗಿತ್ತು. ಆನ್ ಲೈನ್ ಮತ್ತು ಆಫ್ಲೈನ್ ಮೂಲಕ ಮತಚಲಾವಣೆಗೆ ಅವಕಾಶ ನೀಡಲಾಗಿತ್ತು.
ಮೂರು ತಿಂಗಳ ಮತದಾನದ ಬಳಿಕ ಜನರು ಡೊಲ್ಫಿನ್ಗೆ 24,247 ಮತಗಳನ್ನು ಚಲಾಯಿಸಿದ್ದು, ಕಪ್ಪುಚಿಪ್ಪಿನ ಆಮೆಗೆ 17,302 ಮತ್ತು ಕೊಕ್ಕರೆ 18,454 ಮತಗಳು ದೊರೆತಿದೆ. ಈಮೂಲಕ ಜನರು ಡೊಲ್ಫಿನ್ಅನ್ನು ನಗರದ ಪ್ರಾಣಿಯಾಗಿ ಆಯ್ಕೆ ಮಾಡಿದ್ದು ಪೋಷಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಪ್ರಸ್ತುತ ಗಾಂಗಾತೀರ ಬಹ್ಮಪುತ್ರ ಮತ್ತು ಗೌಹಾಟಿ ಸೇರಿದಂತೆ ಒಟ್ಟು ೨೦೦೦ ಡೊಲ್ಫಿನ್ಗಳಿದ್ದು, ೧೨೦೦ ಕೊಕ್ಕರೆಗಳಿದ್ದು ಆಮೆಗಳ ಸಂತತಿ ಅತ್ಯಂತ ಕಡಿಮೆ ಸಂಖ್ಯೆಯಲ್ಲಿದೆ ಎಂದು ಸರ್ವೇಗಳಿಂದ ತಿಳಿದು ಬಂದಿದೆ. ಒಟ್ಟು 60,003 ಮಂದಿ ಮತದಾನನಡೆಸಿದ್ದು,ಇದಕ್ಕಾಗಿ 76 ಶಾಲೆಗಳನ್ನು ಮತದಾನಕ್ಕಾಗಿ ಬಳಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.