ಶ್ರೀನಗರ: ಜಮ್ಮು ಕಾಶ್ಮೀರದೊಳಕ್ಕೆ ಅಕ್ರಮವಾಗಿ ಒಳನುಸುಳುತ್ತಿರುವ ಉಗ್ರರ ಸ್ಮಾರ್ಟ್ ಫೋನ್ಗಳಲ್ಲಿ ’ಕ್ಯಾಲ್ಕ್ಯುಲೇಟರ್’ ಎಂಬ ನೂತನ ಆ್ಯಪ್ ಇರುವುದು ಪತ್ತೆಯಾಗಿದೆ.
ಈ ಆ್ಯಪ್ ಮೂಲಕ ಅವರಿಗೆ ಭಾರತೀಯ ಸೇನೆಯ ಟೆಕ್ನಿಕಲ್ ಸರ್ವಿಲೆನ್ಸ್ಗೂ ತಿಳಿಯದಂತೆ ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ತಮ್ಮ ಸಹಚರರೊಂದಿಗೆ ಸಂಪರ್ಕ ಸಾಧಿಸಲು ಸಾಧ್ಯವಾಗುತ್ತದೆ.
2016ರಲ್ಲಿ ನುಸುಳುಕೋರರ ಸಂಖ್ಯೆ ಹೆಚ್ಚಾಗುತ್ತಿದ್ದು, ಅವರ ಸ್ಮಾರ್ಟ್ಗಳಲ್ಲಿ ಯಾವುದೇ ಮೆಸೇಜ್ ಸ್ಟೋರ್ ಆಗದ ಆ್ಯಪ್ಗಳಿವೆ.
ಉಗ್ರರ ಈ ತಾಂತ್ರಿಕ ಬುದ್ಧಿವಂತಿಕೆಯನ್ನು ಬುಡಮೇಲು ಮಾಡಲು ಸೇನೆ ಕೂಡ ತಂತ್ರಜ್ಞಾನವನ್ನು ಬಳಕೆ ಮಾಡಿಕೊಳ್ಳಬೇಕಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.