ರಾಷ್ಟ್ರೀಯ : ತೃತೀಯ ಲಿಂಗಿಗಳ ಅಭಿವೃದ್ಧಿಗಾಗಿ ಪಿಂಚಣಿ, ಆಹಾರ ಮತ್ತು ವಸತಿ ಸೌಲಭ್ಯಗಳನ್ನು ಒರಿಸ್ಸಾದಲ್ಲಿ ಕೈಗೊಳ್ಳಲಾಗಿದೆ. ಅವರಿಗಾಗಿ ಪಿಂಚಣಿ, ಕೆಲಸ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಒರಿಸ್ಸಾ ಸರಕಾರ ರೂಪಿಸಿದೆ.
ಸಾಮಾನ್ಯವಾಗಿ ಇಂತಹ ಕಾರ್ಯಕ್ರಮಗಳನ್ನು ಚುನಾವಣೆ ಸಮೀಪಿಸುತ್ತಿರುರುವಾಗಲೋ ಅಥವಾ ಚುನಾವಣಾ ಸಂದರ್ಭದಲ್ಲೋ ರೂಪಿಸಲಾಗುತ್ತದೆ. ಆದರೆ ಒರಿಸ್ಸಾ ಈ ಸೌಲಭ್ಯಗಳನ್ನು ಒದಗಿಸುವಲ್ಲಿ ಮುಂದಾಗಿದೆ. ಸಮಾಜ ಕಲ್ಯಾಣ ಇಲಾಖೆಯ ಪ್ರಿಸ್ಸಿಪಲ್ ಸೆಕ್ರೆಟರಿಯಾಗಿರುವ ನಿತಿನ್ ಚಂದ್ರ ಅವರ ಪ್ರಕಾರ ತೃತೀಯಲಿಂಗಿಗಳನ್ನು ಬಡತನ ರೇಖೆಗಿಂತ ಕೆಳಗಿನವರೆಂದು ಪರಿಗಣಿಸಿ ಅವರ ಅಭಿವೃದ್ಧಿಗೆ ಕ್ರಮಕೈಗೊಳ್ಳಬೇಕಾಗಿದೆ. ತೃತೀಯ ಲಿಂಗಿಗಳು ಅತ್ಯಂತ ಶೋಚನಿಯ ಸ್ಥಿತಿಯಲ್ಲಿದ್ದು, ಅವರಿಗೆ ಉದ್ಯೋಗದ ಅವಕಾಶಗಳು ದೊರಯುವುದು ಕಡಿಮೆ ಮತ್ತು ಕಷ್ಟಕರವಾಗಿದೆ.
ಭಾರತದಲ್ಲಿ ತೃತೀಯ ಲಿಂಗಿಗಳ ಸಂಖ್ಯೆ ನಿಖರವಾಗಿ ದಾಖಲಾಗಿಲ್ಲ. ಅಲ್ಲದೇ ಅವರು ಸಾಮಾಜಿಕ ತಾರತಮ್ಯ ಮತ್ತು ಬಹಿಷ್ಕಾರಗಳಿಗೆ ಒಳಗಾಗಿದ್ದು, ಅವರನ್ನು ದೈಹಿಕ, ಮಾನಸಿಕ ಮತ್ತು ಲೈಂಗಿಕವಾಗಿ ದುರುಪಯೋಗ ಮಾಡಿಕೊಳ್ಳಲಾಗುತ್ತಿದೆ. ಉದ್ಯೋಗಾವಕಾಶ ಕೊರತೆಯಿಂದಾಗಿ ಹಲವು ಪುರುಷರು ಮಹಿಳೆಯರು ತೃತೀಯ ಲಿಂಗಿಗಳಾಗಿ ಮಾರ್ಪಟ್ಟಿದ್ದು, ಅವರು ಸಾಮೂಹಿಕ ಮತ್ತು ಗುಂಪುಗಳಾಗಿ ಸೇರಿ ವೈಶ್ಯಾವಾಟಿಕೆ, ಭಿಕ್ಷಾಟನೆ ಸೇರಿದಂತೆ ಬಲವಂತವಾಗಿ ಹಣಕ್ಕೆ ಬೇಡಿಕೆಯನ್ನಿಟ್ಟು ಜೀವನ ನಡೆಸುತ್ತಿದ್ದಾರೆ.
ಸರಕಾರ ಇವರೊಂದಿಗೆ ಎಪ್ರಿಲ್ನಲ್ಲಿ ಮಾತುಕತೆ ನಡೆಸಿ ಸಮಸ್ಯೆಗಳನ್ನು ಆಲಿಸಿದ್ದು, ಅವರ ಅಭಿವೃದ್ಧಿಗಾಗಿ ಕಾರ್ಯಕ್ರಮಗಳನ್ನು ರೂಪಿಸುವ ಭರವಸೆ ನೀಡಿದೆ. ಇವರನ್ನು ಬಡತನ ರೇಖೆಗಿಂತ ಕೆಳಗಿನವರೆಂದು ಫೋಷಿಸಿ ಕ್ರಮಕೈಗೊಳ್ಳಲಾಗಿದೆ. ಸುಪ್ರೀಂಕೋರ್ಟ್ ಇವರ ಅಭಿವೃದ್ಧಿಗಾಗಿ ಮತ್ತು ಸಾಮಾಜಿಕ ಆರ್ಥಿಕನೆಲೆ ಸುಧಾರಿಸಲು ಸರಕಾರಕ್ಕೆ ಆದೇಶಿಸಿದ್ದು, 2014 ರಲ್ಲಿ ಕೋರ್ಟ್ ತೃತೀಯ ಲಿಂಗಿಗಳೆಂದು ನೀಡಿದ್ದ ತೀರ್ಪು ಈ ಸಮುದಾಯದ ಅಭಿವೃದ್ಧಿಗೆ ಪೂರಕವಾಗಲಿದೆ.
ಒರಿಸ್ಸಾದಲ್ಲಿ ಅಂದಾಜು ಲೆಕ್ಕಾಚಾರದ ಪ್ರಕಾರ 40,000 ತೃತೀಯ ಲಿಂಗಿಗಳಿದ್ದು ಅವರಿಗೆ ಬಿಪಿಎಲ್ ದರ್ಜೆ ನೀಡಲಿದ್ದು, ಸರಕಾರದಿಂದ ಪಡೆವ ಎಲ್ಲಾ ಯೋಜನೆಗಳ ಸಹಾಯವನ್ನು ಪಡೆಯಬಹುದು. ಅಲ್ಲದೇ ಉಚಿತವಾಗಿ ಪಡೆವ ಸರಕಾರಿ ಮನೆ ಮತ್ತು 100 ದಿನಗಳ ವೇತನ ಸಹಿತ ಕೆಲಸ ಮತ್ತು ಪಿಂಚಣಿ ಸೌಲಭ್ಯಗಳು, ತಮ್ಮದೇ ಆದ ಉದ್ದಿಮೆ ಸ್ಥಾಪಿಸುವಲ್ಲಿ ಸರಕಾರದಿಂದ ಸಾಲದ ನೆರವು ಸೇರಿದಂತೆ, ಪ್ರತಿ ತಿಂಗಳಿಗೆ 5 ಕೆ.ಜಿ. ಧವಸ ಧಾನ್ಯಗಳನ್ನು ನೀಡಲಾಗುವುದು ಎಂದು ತಿಳಿದುಬಂದಿದೆ.
ಆಲ್ ಒಡಿಸ್ಸಾ ತೃತೀಯಲಿಂಗಿ ವೆಲ್ಫೇರ್ ಟ್ರಸ್ಟ್ ಅಧ್ಯಕ್ಷೆ ಮೀರಾ ಪರೆಡಾ ಸರಕಾರದ ಈ ಕ್ರಮವನ್ನು ಸ್ವಾಗತಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.