ತಿರುವನಂತಪುರಂ : ವಿಶ್ವವಿಖ್ಯಾತ ರಸ್ಲಿಂಗ್ ಪಟು ಮೊಹಮ್ಮದ್ ಅಲಿ ಸಾವಿಗೆ ಇಡೀ ವಿಶ್ವವೇ ಕಂಬನಿ ಮಿಡಿದಿದೆ. ಅಮೆರಿಕಾದಲ್ಲಿ ಸಾವನ್ನಪ್ಪಿದ್ದ ಇವರಿಗೂ ಭಾರತಕ್ಕೂ ಯಾವುದೇ ಸಂಬಂಧವಿಲ್ಲ. ಆದರೆ ಕೇರಳದ ಕ್ರೀಡಾ ಸಚಿವರು ಮಾತ್ರ ಅಲಿ ನಮ್ಮ ಕೇರಳದವರು ಎಂದು ಹೇಳುವ ಮೂಲಕ ದೊಡ್ಡ ನಗೆಪಾಟಲಿಗೆ ಈಡಾಗಿದ್ದಾರೆ.
ಮೊಹಮ್ಮದ್ ಅಲಿ ಸಾವಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದ ಕೇರಳ ಕ್ರೀಡಾ ಸಚಿವ ಜಯರಾಜನ್, ಅಲಿ ಕೇರಳ ಕ್ರೀಡಾ ಜಗತ್ತಿನ ದೊಡ್ಡ ವ್ಯಕ್ತಿತ್ವ ಎಂದು ಬಣ್ಣಿಸಿದ್ದಾರೆ. ಮಾತ್ರವಲ್ಲ ಬಂಗಾರ ಗೆಲ್ಲುವ ಮೂಲಕ ಕೇರಳದ ಗೌರವವನ್ನು ಆಕಾಶದೆತ್ತರಕ್ಕೆ ಕೊಂಡೊಯ್ದಿದ್ದಾರೆ. ಅವರ ಸಾವಿಗೆ ಕೇರಳದ ದುಃಖವನ್ನು ನಾನು ವ್ಯಕ್ತಪಡಿಸುತ್ತಿದ್ದೇನೆ ಎಂದಿದ್ದಾರೆ.
ಅವರ ಈ ಶ್ರದ್ಧಾಂಜಲಿ ಮಾತುಗಳು ದೇಶದ ಜನರನ್ನು ಒಂದು ಕ್ಷಣ ಗೊಂದಲಕ್ಕೆ ದೂಡಿದೆ. ಇವರು ಯಾವ ಅಲಿಯ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಎಲ್ಲರು ಕನ್ಫ್ಯೂಸ್ ಆಗಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಇವರ ವಿರುದ್ಧ ಆಕ್ರೋಶಗಳು ಭುಗಿಲೆದ್ದಿದೆ. ಕೆಲವರಂತು ಇವರನ್ನು ಜೋಕರ್ ಮಾಡಿ ಬಿಟ್ಟಿದ್ದಾರೆ. ಕ್ರೀಡಾ ಜಗತ್ತಿನ ಬಗ್ಗೆ ಕೊಂಚವೂ ಅರಿವಿಲ್ಲದ ವ್ಯಕ್ತಿ ಕ್ರೀಡಾ ಸಚಿವನಾಗಿರುವುದು ದೊಡ್ಡ ದುರಂತವೇ ಸರಿ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.