ನವದೆಹಲಿ: ಹಿಂದೂ ದೇವರುಗಳ ಭಾವಚಿತ್ರವುಳ್ಳ ಡೋರ್ ಮ್ಯಾಟ್ಗಳನ್ನು ಮಾರಾಟ ಮಾಡಿದ ಆನ್ಲೈನ್ ರಿಟೇಲ್ ಸಂಸ್ಥೆ ಅಮೆಜಾನ್ ವಿರುದ್ಧ ಭಾರೀ ಆಕ್ರೋಶಗಳು ಭುಗಿಲೆದ್ದಿವೆ. ಟ್ವಿಟರ್ನಲ್ಲಿ ‘#BycottAmazon’ ಎಂಬ ಹ್ಯಾಶ್ಟ್ಯಾಗ್ ಭಾರೀ ಟ್ರೆಂಡ್ ಆಗುತ್ತಿದೆ.
ಹಿಂದೂ ದೇವರಿಗೆ ಅವಮಾನ ಮಾಡಿರುವ ಈ ಸಂಸ್ಥೆಯನ್ನು ನಿಷೇಧಿಸುವಂತೆ ಭಾರತೀಯ ನೆಟ್ ಬಳಕೆದಾರರು ಸಾಮಾಜಿಕ ಜಾಲತಾಣಗಳಲ್ಲಿ ಬೇಡಿಕೆಯಿಡುತ್ತಿದ್ದಾರೆ.
ಹಿಂದೂ ದೇವರ ಬಗ್ಗೆ ಮಾತ್ರವಲ್ಲ, ಯೇಸು ಕ್ರಿಸ್ತ ಮತ್ತು ಖುರಾನ್ ಮತ್ತು ಇತರ ಇಸ್ಲಾಮಿಕ್ ಥೀಮ್ಗಳ ಚಿತ್ರವುಳ್ಳ ಡೋರ್ಮ್ಯಾಟ್ಗಳನ್ನು ಅಮೆಜಾನ್ ಮಾರಾಟಕ್ಕಿಟ್ಟಿದ್ದು ಸಮಸ್ಯೆಯನ್ನು ಬೇಕಂತಲೇ ಆಹ್ವಾನಿಸಿಕೊಂಡಿದೆ.
ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಈ ಉತ್ಪನ್ನಗಳನ್ನು ಅದು ವಾಪಾಸ್ ತೆಗೆದುಕೊಂಡಿದೆಯಾದರೂ ಜನರ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳಲು ಅದಕ್ಕೆ ಸಾಧ್ಯವಾಗಿಲ್ಲ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.