ನವದೆಹಲಿ: ಪಾಕಿಸ್ಥಾನ ಮೂಲದ ಒಂದು ಗುಂಪು ಕೇಂದ್ರದ 7ನೇ ವೇತನ ಆಯೋಗಕ್ಕೆ ಸಂಬಂಧಿಸಿದಂತೆ ಸರ್ಕಾರಿ ಅಧಿಕಾರಿಗಳನ್ನು ಆಕರ್ಷಿಸಲು ಇಮೇಲ್ಗಳನ್ನು ಕಳಿಸುತ್ತಿದೆ ಎಂದು ಸಾಫ್ಟ್ವೇರ್ ಭದ್ರತಾ ಸಂಸ್ಥೆ ಹೇಳಿದೆ.
ಮೇ ೧೮ರಂದು ಈ ಗುಂಪು ನಕಲಿ ಸುದ್ದಿ ವೆಬ್ಸೈಟ್ ನೋಂದಾಯಿಸಿ ಭಾರತೀಯ ಅಧಿಕಾರಿಗಳಿಗೆ ಸುಳ್ಳು ಈಮೇಲ್ಗಳನ್ನು ಕಳುಹಿಸಿದೆ. ಈ ಇಮೇಲ್ ಕೇಂದ್ರದ ಏಳನೇ ವೇತನ ಆಯೋಗದ ವಿಷಯದಲ್ಲಿ ಆಸಕ್ತಿಯನ್ನು ಉಲ್ಲೇಖಿಸಿ ಕಳುಹಿಸಲಾಗಿತ್ತು ಎಂದು ಭದ್ರತಾ ಸಂಸ್ಥೆ ಫೈರ್ಐ ಹೇಳಿದೆ.
ಸೈಬರ್ ದಾಳಿಕೋರರು ಇಮೇಲ್ಗಳನ್ನು ನಕಲಿ ಸುದ್ದಿ ಡೊಮೈನ್ timesofindiaa.in ಮೂಲಕ ಕಳುಹಿಸಿದ್ದರು. ಭಾರತದ ಪ್ರಮುಖ ಸುದ್ದಿವಾಹಿನಿಯ ಉದ್ಯೋಗಿ ಕಳುಹಿಸಿದಂತೆ ಭಾಸವಾಗುವ ಇಮೇಲ್ನಲ್ಲಿ ಮೈಕ್ರೋಸಾಫ್ಟ್ ವರ್ಡ್ ಡಾಕ್ಯುಮೆಂಟ್ಗಳನ್ನು ಕಳುಹಿಸಲಾಗಿದೆ.
ಅಧಿಕಾರಿಗಳ ಕಂಪ್ಯೂಟರ್ಗಳಿಂದ ಪ್ರೋಗ್ರಾಂಗಳನ್ನು ಕದಿಯಲು ಈ ಡಾಕ್ಯುಮೆಂಟ್ ಕಳುಹಿಸಲಾಗಿದ್ದು, ಇದನ್ನು ಬ್ರೀಚ್ ರಿಮೋಟ್ ಆಡಳಿತ ಉಪಕರಣ (breach remote administration tool ) ಎಂದು ಭದ್ರತಾ ಸಂಸ್ಥೆ ಕರೆದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.