ಬಳ್ಳಾರಿ : ಎರಡನೇ ಬಾರಿಗೆ ಕೂಡ್ಲಗಿ ಡಿವೈಎಸ್ಪಿ ಅನುಪಮಾ ಶೆಣೈ ರಾಜಿನಾಮೆಗೆ ಮುಂದಾಗಿದ್ದು, ತನ್ನ ರಾಜಿನಾಮೆ ಬಗ್ಗೆ ಬಳ್ಳಾರಿ ಎಸ್.ಪಿ ಚೇತನ್ ಅವರಿಗೆ ಸಿಬ್ಬಂದಿ ಮೂಲಕ ರಾಜಿನಾಮೆ ಪತ್ರ ಕಳುಹಿಸಿಕೊಡಲಾಗಿದೆ ಎಂದು ತಿಳಿದು ಬಂದಿದೆ.
ರಾಜಿನಾಮೆ ಪತ್ರವನ್ನು ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಎಸ್ ಪಿ ಚೇತನ್ ಅವರು ತಿಳಿಸಿದ್ದಾರೆ. ಅನುಪಮಾ ಶೆಣೈಯವರನ್ನು ಈ ಹಿಂದೆ ಸಚಿವ ಪರಮೇಶ್ವರ್ ನಾಯ್ಕ್ ಅವರು ತಮ್ಮ ಕರೆ ಸ್ವೀಕರಿಸಿಲ್ಲ ಎಂಬ ಕಾರಣಕ್ಕೆ ಅವರನ್ನು ಎತ್ತಂಗಡಿ ಮಾಡಿಸಿದ್ದು, ರಾಜ್ಯದ ಜನರು ಅನುಪಮಾ ಶೆಣೈಗೆ ಬೆಂಬಲಿಸಿದ್ದರು. ರಾಜ್ಯದ ಜನರ ಒತ್ತಡಕ್ಕೆ ಮಣಿದ ಸರಕಾರ ಅವರ ಎತ್ತಂಗಡಿಯನ್ನು ಹಿಂಪಡೆದುಕೊಂಡಿತ್ತು.
ಕಾಂಗ್ರೆಸ್ ಮುಖಂಡರ ಬೆಂಬಲಿಗರೊಬ್ಬರು ಪರವಾನಿಗೆ ಇಲ್ಲದೇ ಕಟ್ಟಡ ಕಟ್ಟುತ್ತಿದ್ದು, ದಲಿತ ಸಂಫಟನೆಗಳು ಇದನ್ನು ವಿರೋಧಿಸಿ ದೂರು ನೀಡಿತ್ತು. ಕಟ್ಟಡ ಕೆಲಸ ನಿಲ್ಲಿಸಲು ಸೂಚಿಸಿದಾಗ ಅವರ ಬೆಂಬಲಿಗರು ಠಾಣೆಯ ಮುಂದೆ ಅನುಪಮಾ ಅವರ ವಿರುದ್ದ ಪ್ರತಿಭಟನೆಯನ್ನು ನಡೆಸಿದ್ದಾರೆ. ಇದಕ್ಕೆ ಮನನೊಂದ ಅವರು ರಾಜಿನಾಮೆಗೆ ನೀಡುವ ನಿರ್ಧಾರಕ್ಕೆ ಬಂದಿದ್ದು, ಸಿಬ್ಬಂದಿ ಮೂಲಕ ರಾಜಿನಾಮೆಯನ್ನು ಕಳುಹಿಸಿಕೊಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.