ಬಲ್ಗೇರಿಯಾ: ಭಾರತದ ಖ್ಯಾತ ಮರಳು ಕಲಾವಿದ ಸುದರ್ಶನ್ ಪಟ್ನಾಯಕ್ ಬಲ್ಗೇರಿಯಾದಲ್ಲಿ ನಡೆದ ವಿಶ್ವ ಮರಳು ಶಿಲ್ಪಕಲೆ ಸ್ಪರ್ಧೆ ರುಸ್ಸೀ-2016 ರಲ್ಲಿ ತನ್ನ ’ಡ್ರಗ್ಸ್ ಕಿಲ್ ಸ್ಪೋರ್ಟ್ಸ್’ ಶಿಲ್ಪಕಲೆಗೆ ಪೀಪಲ್ಸ್ ಚಾಯ್ಸ್ ಚಿನ್ನದ ಪದಕ ಗೆದ್ದುಕೊಂಡಿದ್ದಾರೆ.
ಆಧುನಿಕ ತಂತ್ರಜ್ಞಾನದೊಂದಿಗೆ ಕ್ರೀಡೆಗಳು ಮುಂದುವರೆಯುತ್ತಿದ್ದು, ವೈಯಕ್ತಿಕ ಕ್ರೀಡೆಗಳು, ಸಂಘಟಕರು, ನಿಯಂತ್ರಕರು ಎಲ್ಲರೂ ಹೊಸ ಸವಾಲುಗಳನ್ನು ಎದುರಿಸುವ ಸ್ಪರ್ಧೆಗೆ ಮುಂದಾಗಿದ್ದಾರೆ. ಇಂತಹ ಸಂದರ್ಭದಲ್ಲಿ ಕ್ರೀಡಾಪಟುಗಳು ತಮ್ಮ ಕಾರ್ಯಕ್ಷಮತೆಗೆ ಬಳಸುವ ಔಷಧಗಳ ಉಪಯೋಗ ಕ್ರೀಡೆಗಳನ್ನು ಕೊಲ್ಲುತ್ತಿವೆ. ನನ್ನ ’ಡ್ರಗ್ಸ್ ಕಿಲ್ ಸ್ಪೋರ್ಟ್ಸ್’ ಜಾಗೃತಿ ಮೂಡಿಸುವ ಶಿಲ್ಪಕಲೆಯಾಗಿದೆ ಎಂದು ಸುದರ್ಶನ್ ಪಟ್ನಾಯಕ್ ಹೇಳಿದ್ದಾರೆ.
ಮೇ 26 ರಿಂದ ಜೂ.3ರ ವರೆಗೆ ನಡೆದ ಈ ಸ್ಪರ್ಧೆಯಲ್ಲಿ ವಿಶ್ವದಾದ್ಯಂತ ಪ್ರಸಿದ್ಧರಾದ 10 ಕಲಾವಿದರು ಭಾಗವಹಿಸಿದ್ದರು. ಸ್ಪರ್ಧೆಯ ವಿಷಯ ’ಸ್ಪೋರ್ಟ್ಸ್ ವರ್ಲ್ಡ್ ಮತ್ತು ಒಲಿಂಪಿಕ್ ಸಿಂಬಲ್’ ಆಗಿತ್ತು.
ಮದ್ದು ಸೇವನೆಯಿಂದ ವಿವಾದಕ್ಕೆ ಸಿಲುಕಿದ್ದ ಕ್ರೀಡಾಪಟುಗಳಾದ ಲ್ಯಾನ್ಸ್ ಆರ್ಮ್ಸ್ಟ್ರಾಂಗ್ ಮತ್ತು ಮಾರಿಯಾ ಶರಪೋವಾ ಅವರ ಮುಖವನ್ನು ಸುದರ್ಶನ್ ರಚಿಸಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.