ಬೆಂಗಳೂರು : ಪೊಲೀಸರು ರಾಜ್ಯದಾದ್ಯಂತ ಸಾಮೂಹಿಕ ರಜೆ ಪಡೆದು ನಡೆಸಲಿಚ್ಚಿಸಿದ್ದ ಪ್ರತಿಭಟನೆಗೆ ನೀರಸ ಪ್ರತಿಕ್ರಿಯೆ ದೊರೆತಿದ್ದು, ಸಿಬ್ಬಂದಿಗಳು ಎಂದಿನಂತೆ ಕರ್ತವ್ಯಕ್ಕೆ ಹಾಜರಾಗಿದ್ದಾರೆ.
ರಾಜ್ಯ ಪೊಲೀಸರಿಗೆ ಸರಿಯಾಗಿ ವಾರದ ರಜೆ ಸಿಗುತ್ತಿಲ್ಲ. ಪೇದೆಗಳ ಕೆಲಸದ ಕಾಲ ಮಿತಿ ಇಲ್ಲದೆ 15 ರಿಂದ 18 ಗಂಟೆಗಳ ಕಾಲ ದುಡಿಸಲಾಗುತ್ತಿದೆ. ಅಲ್ಲದೇ ಅಧಿಕಾರಿಗಳು ಕಿರುಕುಳ ನೀಡುತ್ತಿದ್ದಾರೆ. ಇದರಿಂದ ಇದರಿಂದ ಮಾನವಹಕ್ಕು ಉಲ್ಲಂಘನೆಯಾಗುತ್ತಿದೆ ಎಂದು ಸಾಮೂಹಿಕ ರಜೆಹಾಕಿ ಪ್ರತಿಭಟನೆ ನಡೆಸಲು ಮತ್ತು ಬೇಡಿಕೆ ಈಡೇರಿಸುವಂತೆ ಕರೆ ನೀಡಲಾಗಿತ್ತು.
ಸರಕಾರ ಮತ್ತು ಗೃಹ ಸಚಿವರು ಮಧ್ಯ ಪ್ರವೇಶಿಸಿ ಎಸ್ಮಾ ಕಾಯಿದೆಯನ್ನು ಜಾರಿ ಮಾಡಿದರಲ್ಲದೇ, 35 ಬೇಡಿಕೆಗಳಲ್ಲಿ 12 ಬೇಡಿಕೆ ಈಡೇರಿಸಲು ಸಮ್ಮತಿಸಿ ಪತ್ರಿಭಟನೆಯನ್ನು ಹತ್ತಿಕ್ಕಲಾಗಿದೆ ಎನ್ನಲಾಗುತ್ತಿದೆ. ಅಲ್ಲದೇ ಕೆಲವೆಡೆ ಪೊಲೀಸ್ ಕ್ವಾಟರ್ಸ್ಗೆ ಬಿಗಿ ಭದ್ರತೆ ಒದಗಿಸುವ ನೆಪದಲ್ಲಿ ಪೊಲೀಸರನ್ನು ಕರ್ತವ್ಯಕ್ಕೆ ಹಾಜರಾಗುವಂತೆ ಮಾಡಲು ಮತ್ತು ಪ್ರತಿಭಟನೆ ನಡೆಸದೆ ಕರ್ತವ್ಯಕ್ಕೆ ಹಾಜರಾಗುವಂತೆ ಮಾಡಲು ಈ ಕ್ರಮ ಕೈಗೊಳ್ಳಲಾಗಿದೆ ಎನ್ನಲಾಗುತ್ತಿದೆ.
ಮುಂಜಾಗ್ರತಾ ಕ್ರಮವಾಗಿ ಗೃಹರಕ್ಷಕ ದಳದ ಸಿಬ್ಬಂದಿಗಳನ್ನು ನೇಮಿಸಿದ್ದು, ಸಿಆರ್ಪಿಎಫ್ ತುಕಡಿಗಳನ್ನು ನಿಯೋಜಿಸಲಾಗಿದೆ. ಮಂಡ್ಯದಲ್ಲಿ ಪ್ರತಿಭಟನೆಗೆ ಮುಂದಾದ ಪೇದೆಯನ್ನು ಬಂಧಿಸಲಾಗಿದ್ದು, ಕೊಡಗಿನಲ್ಲಿ ಪೊಲೀಸರಿಗೆ ಬೆಂಬಲ ಸೂಚಿಸಿ ನಾಗರಿಕರಿಂದ ಪ್ರತಿಭಟನೆ ಪ್ರಾರಂಭವಾಗಿದೆ.
ಇದಲ್ಲದೆ, ಕರ್ನಾಟಕ ರಾಜ್ಯ ಪೊಲೀಸ್ ಸಂಘದ ಅಧ್ಯಕ್ಷ ಶಶಿಧರ್ ಅವರನ್ನು ಬುಧವಾರ ರಾತ್ರಿ ಬಂಧಿಸಲಾಗಿದ್ದು, ಅವರ ಪತ್ನಿ ಪೂರ್ಣಿಮಾ ಶಶಿಧರ್ ಫ್ರೀಡಂ ಪಾರ್ಕ್ ಎದುರು ಪ್ರತಿಭಟನೆ ನಡೆಸುತ್ತಿದ್ದಾಗ ಪೊಲೀಸರು ಪ್ರತಿಭಟನೆ ಮಾಡದಂತೆ ಹೇಳಿದ್ದು, ಪ್ರತಿಭಟನೆ ಕೈಬಿಡದಿದ್ದಾಗ ಅವರನ್ನೂ ಬಂಧಿಸಲಾಗಿದೆ. ಈ ಮೂಲಕ ರಾಜ್ಯದಲ್ಲಿ ‘ಪವರ್ ಪ್ರೆಶರ್’ ಬಳಸಿ ಹತ್ತಿಕ್ಕಲಾಗುತ್ತಿದೆ ಎಂದು ಹೇಳಲಾಗುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.