ವಾಷಿಂಗ್ಟನ್: ಅಮೇರಿಕಾದ ಆಯ್ದ ವಿಮಾನ ನಿಲ್ದಾಣಗಳಲ್ಲಿ ಹೆಚ್ಚಿನ ಭದ್ರತಾ ಪರವಾನಗಿಯೊಂದಿಗೆ ಭಾರತೀಯರ ಸುಗಮ ಪ್ರವೇಶಕ್ಕೆ ಎರಡೂ ರಾಷ್ಟ್ರಗಳು ಒಪ್ಪಂದ ಮಾಡಿಕೊಂಡಿವೆ.
ವಿಶ್ವದ ಎರಡು ಪ್ರಜಾಪ್ರಭುತ್ವ ರಾಷ್ಟ್ರಗಳ ನಡುವೆ ಬೆಳೆಯುತ್ತಿರುವ ಸಂಬಂಧಗಳ ಫಲವಾಗಿ ಭಾರತ ಅಂತಾರಾಷ್ಟ್ರೀಯ ಸುಗಮ ಎಂಟ್ರಿ ಒಪ್ಪಂದ ಅಥವಾ ಗ್ಲೋಬಲ್ ಎಂಟ್ರಿ ಪ್ರೋಗ್ರಾಂ ಒಪ್ಪಂದ ಮಾಡಿಕೊಂಡಿರುವ ಒಂಬತ್ತನೇ ದೇಶವಾಗಿದೆ.
ಭಾರತದ ಅಮೇರಿಕಾ ರಾಯಭಾರಿ ಅರುಣ್ ಕೆ. ಸಿಂಗ್ ಮತ್ತು ಅಮೇರಿಕಾದ ಕಸ್ಟಮ್ಸ್ ಮತ್ತು ಗಡಿ ಭದ್ರತಾ ಉಪ ಆಯುಕ್ತ ಕೆವಿನ್ ಕೆ. ಮೆಕ್ಲೀನನ್ ನಡುವೆ ಒಪ್ಪಂದಕ್ಕೆ ಸಹಿ ಹಾಕಲಾಯತು.
ಉಭಯ ರಾಷ್ಟ್ರಗಳು ಜಂಟಿ ಪರಿಶೀಲನೆ ಮತ್ತು ತೆರವು ಒಪ್ಪಂದ ಅನುಮೋದನೆಯೊಂದಿಗೆ ಭಾರತೀಯ ಪ್ರಯಾಣಿಕರು ಅಮೇರಿಕಾದ ಆಯ್ದ ವಿಮಾನ ನಿಲ್ದಾಣಗಳಲ್ಲಿ ಪ್ರವೇಶಿಸಬಹುದು. ಭದ್ರತೆ ಪ್ರವೇಶ ಸೌಲಭ್ಯವನ್ನು ವಿಸ್ತರಿಸಲಾಗುವುದು.
ಅಮೇರಿಕಾದ ವಿಮಾನ ನಿಲ್ದಾಣಗಳಲ್ಲಿ ಚುರುಕು ಭದ್ರತೆ ಪ್ರವೇಶ ಯೋಜನೆಯಡಿ ಭಾರತೀಯ ಪ್ರವಾಸಿಗರು ಸುಗಮ ಪ್ರಯಾಣ ಪರಿಸರ ಹೊಂದಲಿದ್ದು, ಎರಡು ದೇಶಗಳ ವಿನಿಮಯವು ಧನಾತ್ಮಕ ರೀತಿಯಲ್ಲಿ ಸಾಗಲಿದೆ ಎಂದು ಅರುಣ್ ಕೆ. ಸಿಂಗ್ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.