ನವದೆಹಲಿ: ವಿಮಾನ ನಿಲ್ದಾಣಗಳಿಗೆ ಪ್ರಸಿದ್ಧ ವ್ಯಕ್ತಿಗಳ ಹೆಸರು ನಾಮಕರಣದ ವಿರುದ್ಧ ವಿವಾದಗಳು ಹೆಚ್ಚುತ್ತಿದ್ದು, ಹೊಸ ನಿಲ್ದಾಣಗಳು ನಿರ್ಮಾಣಗೊಂಡಲ್ಲಿ ನಗರಗಳ ಹೆಸರನ್ನೇ ನಾಮಕರಣ ಮಾಡುವಂತೆ ವಿಮಾನಯಾನ ಸಚಿವಾಲಯ ಚಿಂತನೆ ನಡೆಸುತ್ತಿದೆ.
ಆದರೆ ಈ ಹೊಸ ನಿಯಮವು ಏರ್ಪೋರ್ಟ್ ಟರ್ಮಿನಲ್ ಮತ್ತು ಲಾಂಜ್ಗಳಿಗೆ ಪ್ರಸಿದ್ಧ ವ್ಯಕ್ತಿಗಳ ಹೆಸರನ್ನ ಹೆಸರಿಸಲು ಅನುಮತಿ ನೀಡಲಿದೆ.
ಈ ನಿಮಯಗಳ ಟಿಪ್ಪಣಿಯನ್ನು ಆಂತರಿಕ ಸಚಿವಾಲಯಕ್ಕೆ ಕಳುಹಿಸಲಾಗಿದ್ದು, ಸಚಿವಾಲಯವು ಒಂದು ತಿಂಗಳ ಒಳಗಾಗಿ ತನ್ನ ನಿರ್ಧಾರ ಕೈಗೊಳ್ಳುವ ನಿರೀಕ್ಷೆ ಇದೆ. ಪ್ರಸ್ತುತ ಇರುವ ನಿಲ್ದಾಣಗಳ ಹೆಸರನ್ನು ಬದಲಾಯಿಸುವುದಿಲ್ಲ ಎಂದು ವಿಮಾನಯಾನ ಸಚಿವಾಲಯದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಈ ಹೊಸ ನಿಯಮವು ಹೊಸದಾಗಿ ನಿರ್ಮಿಸಲಾಗುವ ಅಥವಾ ಈಗಾಗಲೇ ನಿಲ್ದಾಣಗಳಿರುವ ನಗರಗಳಲ್ಲಿ ನಿರ್ಮಿಸಲಾಗುವ ಇತರ ನಿಲ್ದಾಣಗಳಿಗೆ ಅನ್ವಯವಾಗಲಿದೆ. ದೆಹಲಿ, ಮುಂಬಯಿ, ಗೋವಾಗಳಲ್ಲಿ ಹೊಸ ನಿಲ್ದಾಣಗಳ ನಿರ್ಮಾಣದ ಪ್ರಸ್ತಾಪಕ್ಕೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ.
ರಾಜ್ಯ ವಿಧಾನಸಭೆಯಲ್ಲಿ ಪ್ರಸ್ತಾಪಿಸಲಾಗಿರುವ ಹೆಸರನ್ನು ರಾಜ್ಯ ಸರ್ಕಾರ ಕೇಂದ್ರಕ್ಕೆ ಸಲ್ಲಿಸಲಿದ್ದು, ಕೇಂದ್ರ ಸಚಿವ ಸಂಪುಟ ಅಂತಿಮ ನಿರ್ಧಾರ ಕೈಗೊಳ್ಳಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.