ಕಾಠ್ಮಂಡು: ಶಾಲೆಗಳಲ್ಲಿ ದಾಖಲು ಪಡೆದು, ಸಾಕ್ಷರತೆ ಹೆಚ್ಚಿಸುವಂತೆ ಪ್ರೋತ್ಸಾಹಿಸಲು ಭಾರತವು ನೇಪಾಳದ ಬಡ ದಲಿತ ಬಾಲಕಿಯರಿಗೆ 2000 ಸೈಕಲ್ಗಳನ್ನು ಉಡುಗೊರೆಯಾಗಿ ನೀಡಿದೆ.
ನೇಪಾಳದ ವಿವಿಧ ಸರ್ಕಾರಿ ಶಾಲೆಗಳಲ್ಲಿ ಅಧ್ಯಯನ ನಡೆಸುತ್ತಿರುವ ಬಡ ದಲಿತ ಬಾಲಕಿಯರಿಗೆ 2000 ಸೈಕಲ್ಗಳನ್ನು ವಿತರಿಸಲಾಗಿದೆ ಎಂದು ಭಾರತದ ರಾಯಭಾರಿ ಕಚೇರಿ ತಿಳಿಸಿದೆ.
ಭಾರತ ಸರ್ಕಾರ ರೂ. 13.65 ಮಿಲಿಯನ್ ವೆಚ್ಚದ ಸಣ್ಣ ಅಭಿವೃದ್ಧಿ ಯೋಜನೆಯಡಿಯಲ್ಲಿ ಈ ಸೈಕಲ್ಗಳನ್ನು ನೀಡಲಾಗಿದೆ ಎಂದು ಅದು ಹೇಳಿದೆ.
ನೇಪಾಳದ ಟೆರೈಯ ವಿವಿಧ ಜಿಲ್ಲೆಗಳ ಬಾಲಕಿಯರ ಸಾಕ್ಷರತೆ ಕಡಿಮೆ ಇದ್ದು, ಮೂಲ ಶಿಕ್ಷಣ, ಸಮುದಾಯ ಜಾಗೃತಿ, ಮಹಿಳಾ ಸಬಲೀಕರಣ ಕ್ಷೇತ್ರಗಳಿಗೆ ವಿಶೇಷ ಗಮನ ಅಗತ್ಯ. ವಿದ್ಯಾರ್ಥಿನಿಯರು ಅರ್ಧದಲ್ಲಿಯೇ ಶಾಲೆ ಬಿಡುವುದು ಮುಂತಾದ ಸಮಸ್ಯೆಗಳನ್ನು ನವೀನ ವಿಧಾನಗಳಿಂದ ತಡೆಗಟ್ಟುವ ನಿಟ್ಟಿನಲ್ಲಿ ಭಾರತ ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಅದು ತಿಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.