ಎಸ್ಟ್ಫೀಲ್ಡ್: 1947ರಲ್ಲಿ ವಿನ್ಯಾಸಗೊಳಿದ ವಿಶ್ವದ ಅತೀ ಉದ್ದದ ರೈಲು ಸುರಂಗ 7 ದಶಕಗಳ ಬಳಿಕ ತೆರೆಯಲಾಗುತ್ತಿದೆ.
ಗಾಥರ್ಡ್ ಬೇಸ್ ಟನೆಲ್ ಹೆಸರಿನ ಈ ಸುರಂಗ ಸ್ವಿಟ್ಜರ್ಲ್ಯಾಂಡ್ನ ಎಸ್ಟ್ಫೀಲ್ಡ್ನ ಆಲ್ಪ್ಸ್ನಿಂದ ದಕ್ಷಿಣ ಟಿಕಿನೋ ಕ್ಯಾಂಟನ್ನ ಬೋಡಿಯೋ ನಡುವೆ 57 ಕಿ.ಮೀ. (35 ಮೈಲು) ಉದ್ದವಿದೆ.
ಗಾಥರ್ಡ್ ಪಾಸ್ ಅಡಿಯಿಂದ ಸಾಗುವ ಈ ಸುರಂಗ ಮಾರ್ಗದ ಕರಡು ವಿನ್ಯಾಸವನ್ನು 1947 ರಲ್ಲಿ ಸ್ವಿಸ್ ಇಂಜಿನಿಯರ್ ಕಾರ್ಲ್ ಎಡ್ವರ್ಡ್ ಗ್ರೂನರ್ ಚಿತ್ರಿಸಿದ್ದರು. ಆದರೆ ಅಧಿಕಾರಿಗಳ ವಿಳಂಬ, ವೆಚ್ಚ ಮತ್ತಿತರ ಅಡಚಣೆಗಳಿಂದ ಇದರ ನಿರ್ಮಾಣ ಕಾರ್ಯ 1999ರ ವರೆಗೆ ಮುಂದೂಡಲ್ಪಟ್ಟಿತು.
17 ವರ್ಷಗಳ ನಂತರ 12 ಬಿಲಿಯನ್ ಡಾಲರ್ ವೆಚ್ಚದ ಗಾಥರ್ಡ್ ಬೇಸ್ ಸುರಂಗ ಈಗ ಉದ್ಘಾಟನೆಗೆ ಸಜ್ಜಾಗಿದೆ.
ಈ ಸುರಂಗದ ಮೂಲಕ ಝೂರಿಚ್ನಿಂದ ಮಿಲಾನ್ಗೆ 40 ನಿಮಿಷಗಳಲ್ಲಿ ರೈಲು ಸಂಚರಿಸಲಿದೆ.
ಗಾಥರ್ಡ್ ಸುರಂಗ ಡಿಸೆಂಬರ್ ತಿಂಗಳಲ್ಲಿ ಅಧಿಕೃತವಾಗಿ ತೆರೆದಲ್ಲಿ ವಿಶ್ವದ ಅತೀ ಉದ್ದದ ಸುರಂಗ ಜಪಾನ್ನ ಸೀಕಾನ್ (53.9 ಕಿ.ಮೀ.)ನ್ನು ಹಿಂದಿಕ್ಕಲಿದೆ. ಇಂಗ್ಲೆಂಡ್ ಮತ್ತು ಫ್ರಾನ್ಸ್ ನಡುವಿನ ಕೊಂಡಿಯಾಗಿರುವ ’ಚಾನೆಲ್’ ಸುರಂಗ (50.5 ಕಿ.ಮೀ.) 3ನೇ ಸ್ಥಾನಕ್ಕೆ ಕುಸಿಯಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.