ನವದೆಹಲಿ: ಬಾಹ್ಯಾಕಾಶದೊಂದಿದೆ ಸಂಪರ್ಕ ಹೊಂದುವ ತಂತ್ರಜ್ಞಾನವನ್ನು ವಿಜ್ಞಾನಿಗಳು ಕಂಡು ಹಿಡಿದಿದ್ದು, ಇದೀಗ ಫೇಸ್ಬುಕ್ ಸಿಇಒ ಮಾರ್ಕ್ ಝುಕರ್ಬರ್ಗ್ ಅವರು ಅಂತಾರಾಷ್ಟ್ರೀಯ ಬಾಹ್ಯಾಕಾಶ ಸಂಸ್ಥೆಯ ಗಗನಯಾತ್ರಿಗಳೊಂದಿಗೆ ಮೊದಲ ಲೈವ್ ಚ್ಯಾಟ್ ಮಾಡುವ ಆತಿಥ್ಯ ವಹಿಸಲಿದ್ದಾರೆ.
ಫೇಸ್ಬುಕ್ ಲೈವ್ ಚ್ಯಾಟ್ ಜೂನ್ 1 ರಂದು ಭಾರತಿಯ ಕಾಲಮಾನ ರಾತ್ರಿ 10.25ಕ್ಕೆ ನಡೆಯಲಿದೆ. ಫೇಸ್ಬುಕ್ ಬಳಕೆದಾರರು ತಮ್ಮ ಪ್ರಶ್ನೆಗಳನ್ನು ಫೇಸ್ಬುಕ್ನ ’ಇವೆಂಟ್ಸ್ ಪೇಜ್’ನಲ್ಲಿ ಪೋಸ್ಟ್ ಮಾಡುವಂತೆ ಝುಕರ್ಬರ್ಗ್ ಕೇಳಿಕೊಂಡಿದ್ದಾರೆ.
ಬಾಹ್ಯಾಕಾಶದಿಂದ ಮೊದಲ ಫೇಸ್ಬುಕ್ ಲೈವ್ ಚ್ಯಾಟ್ ಇದಾಗಿದ್ದು, ಝುಕರ್ಬರ್ಗ್ ಅವರು ಫೇಸ್ಬುಕ್ ಪ್ರಧಾನ ಕಚೇರಿಯಿಂದ ಅಂತಾರಾಷ್ಟ್ರೀಯ ಬಾಹ್ಯಾಕಾಶ ಸಂಸ್ಥೆಯ ಗಗನಯಾತ್ರಿಗಳೊಂದಿಗೆ ಲೈವ್ ಚ್ಯಾಟ್ ಮಾಡಲಿದ್ದಾರೆ.
ಸಾಮಾಜಿಕ ಜಾಲತಾಣ ಫೇಸ್ಬುಕ್ನ ’ಫೇಸ್ಬುಕ್ ಲೈವ್’ ಹೊಸ ವೈಶಿಷ್ಟ್ಯಗಳೊಂದಿಗೆ ಬಳಕೆದಾರರು ನೈಜ ಸಮಯ (real time)ದಲ್ಲೇ ವೀಡಿಯೋ ಚ್ಯಾಟ್ ಮಾಡಲು ಅನುಮತಿಸುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.