ಮುಂಬಯಿ : ಬೆಂಗಳೂರಿನ ಹೆಸರಾಂತ ಸುದ್ದಿ ಛಾಯಾಗ್ರಾಹಕ ನಾಗೇಶ್ ಪೊಳಲಿ ನೇತೃತ್ವದಲ್ಲಿ ಇದೇ ಜೂ2ರಂದು ಆರ್.ಟಿ ನಗರದಲ್ಲಿ ಜೆ.ಪಿ ಗ್ಲೋಬಲ್ ವಿಜ್ಯುವಲ್ ಜರ್ನಲಿಸಂ ಇನ್ಸ್ಟಿಟ್ಯೂಟ್ ಆರಂಭಿಸಲಿದ್ದಾರೆ.
ಬೆಂಗಳೂರು ಅಲ್ಲಿನ ಆರ್.ಟಿ ನಗರದ ಮುಖ್ಯ ರಸ್ತೆಯಲ್ಲಿನ ಆರ್ಟಿ ಪ್ಲಾಜ್ಹಾ ಕಟ್ಟಡದ 3ನೇ ಮಹಡಿಯಲ್ಲಿನ ಟಿಎಫ್೪ನಲ್ಲಿ ಸೇವೆಯಲ್ಲಿ ತೊಡಗಿಸಲಿರುವ ಸಂಸ್ಥೆಯು ಫೋಟೋ ಜರ್ನಲಿಸಂ, ಆರ್ಟ್ ಜರ್ನಲಿಸಂ ಮತ್ತು ಕಾರ್ಟೂನ್ ಜರ್ನಲಿಸಂಗಳ ಮೂರು ಪ್ರಮುಖ ವಿಷಯಗಳನ್ನೊಳಗೊಂಡು ಕಾರ್ಯತಃ (ಪ್ರ್ಯಾಕ್ಟಿಕಲಿ) ತರಬೇತಿ ನೀಡಲಿದೆ. ವಾರದ ಐದು ದಿನಗಳಲ್ಲಿ ನಿರಂತರವಾಗಿ ಆರು ತಿಂಗಳ, ಅಥವಾ ಸತತ ವಾರಂತ್ಯದ ಎರಡು ದಿನಗಳನ್ನೊಳಗೊಂಡು ಒಂದು ವರ್ಷದ ಕೋರ್ಸ್ ಮೂಲಕ ಈ ತರಬೇತಿ ನೀಡಲಿದ್ದಾರೆ.
ಇದೀಗಾಗಲೇ ಸುಮಾರು 42 ನಿರುದ್ಯೋಗಿ ಯುವಕರಿಗೆ ಛಾಯಾಚಿತ್ರಣದ ತರಬೇತಿ ನೀಡಿ ಸ್ವಉದ್ಯೋಗಕ್ಕೆ ಪ್ರೇರಕರಾಗಿರುವ ನಾಗೇಶ್ ನಾಡಿನ ಹೆಸರಾಂತ ಸುದ್ದಿ ಛಾಯಾಗ್ರಾಹಕರೆಣಿಸಿದ್ದಾರೆ. ಮುಂಬೈಯ ಕರ್ನಾಟಕಮಲ್ಲ ದೈನಿಕದ ಆರಂಭಿಕ ಹಾಗೂ ಮ್ಯಾಂಗಳೂರು ಟುಡೇ ಆಂಗ್ಲ ಮಾಸಿಕದ ಪ್ರಥಮ ಸುದ್ದಿ ಛಾಯಾಗ್ರಾಹಕ, ಪ್ರಸ್ತುತ ಬೆಂಗಳೂರಿನ ಇಂಡಿಯನ್ ಎಕ್ಸ್ಪ್ರೆಸ್ನ ಆಂಗ್ಲ ದೈನಿಕದ ಹಿರಿಯ ಫೋಟೋ ಜರ್ನಲಿಸ್ಟ್ ಆಗಿ ಸೇವೆಸಲ್ಲಿರುತ್ತಿರುವ ಪೊಳಲಿ ಅವರು ಉಜಿರೆ ಅಲ್ಲಿನ ಎಸ್ಡಿಎಂ ಕಾಲೇಜು, ಬೆಂಗಳೂರು ಜಲಹಳ್ಳಿಯ ಸೈಂಟ್ ಪ್ಲಾರೇಟ್ ವಿವಿ ಕಾಲೇಜು, ಗುಲ್ಬರ್ಗ ವಿಶ್ವವಿದ್ಯಾಲಯ, ರಾಯಚೂರುನ ಪೋಸ್ಟ್ ಗ್ರಾಜ್ಯುವೇಟ್ ಇತ್ಯಾದಿ ಹಲವಾರು ಶಿಕ್ಷಣ ಸಂಸ್ಥೆಗಳಲ್ಲಿ ಲೈಫ್ಸ್ಟೈಲ್ ಮತ್ತು ಛಾಯಾಚಿತ್ರಗಳ ಬಗ್ಗೆ ಉಪನ್ಯಾಸಗಳ ನೀಡಿರುವರು.
ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ (ಕಪಸಮ) ಸಂಸ್ಥೆಯು ಕಳೆದ ಬಾರಿ ಆಯೋಜಿಸಿರುವ ರಾಷ್ಟ್ರದ ಪ್ರಪ್ರಥಮ ಮೂರು ದಿನಗಳ ಅಖಿಲ ಭಾರತ ಕನ್ನಡ ಪತ್ರಕರ್ತರ ಸಮಾವೇಶದಲ್ಲಿ ಸಕ್ರೀಯವಾಗಿ ಪಾಲ್ಗೊಂಡಿದ್ದ ಪೊಳಲಿ ಸಂಘದ ನಿಯೋಗವು, ರಾಜಭವನಕ್ಕೆ ತೆರಳಿದಾಗ ನಿಯೋಗದೊಂದಿಗೆ ಆಗಮಿಸಿ ಮಹಾರಾಷ್ಟ್ರ ರಾಜ್ಯದ ರಾಜ್ಯಪಾಲ ಸಿಹೆಚ್ ವಿದ್ಯಾಸಾಗರ್ ರಾವ್ ಅವರನ್ನು ಗೌರವಿಸಿದರು.
ಶೀಘ್ರದಲ್ಲೇ ಸಂಸ್ಥೆಯನ್ನು ಮುಂಬಯಿ ಮಹಾನಗರದಲ್ಲೂ ವಿಸ್ತರಿಸಲಾಗುವುದು. ಆಸಕ್ತರು ಮೊಬೈಲ್ ಸಂಖ್ಯೆ 09342393356 ಅಥವಾ nageshpolali@gmail.com ಇ-ಮೇಯ್ಲ್ ಮೂಲಕ ಸಂಪರ್ಕಿಸಿ ಪ್ರವೇಶ ಪಡೆಯ ಬಹುದು ಎಂದು ನಾಗೇಶ್ ಪೊಳಲಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.