ನವದೆಹಲಿ: ಕಳೆದ 17 ತಿಂಗಳುಗಳಲ್ಲಿ ಭಾರತದಲ್ಲಿ ಸುಮಾರು 2234 ಜನರು ಬ್ಲಡ್ ಟ್ರಾನ್ಫ್ಯೂಸಿಂಗ್ನಿಂದಾಗಿ ಎಚ್ಐವಿಗೆ ತುತ್ತಾಗಿದ್ದಾರೆ ಎಂದು ವರದಿಯೊಂದು ತಿಳಿಸಿದೆ.
ಉತ್ತರಪ್ರದೇಶ ಒಂದರಲ್ಲೇ 361 ಮಂದಿ ಎಚ್ಐವಿಗೆ ತುತ್ತಾಗಿದ್ದಾರೆ. ಗುಜರಾತ್ನಲ್ಲಿ 292 ಮಂದಿ, ಮಹಾರಾಷ್ಟ್ರದಲ್ಲಿ 276 ಮಂದಿ, ದೆಹಲಿಯಲ್ಲಿ 264 ಮಂದಿ ಎಚ್ಐವಿಗೆ ತುತ್ತಾಗಿದ್ದಾರೆ.
ಆಸ್ಪತ್ರೆಗಳಲ್ಲಿ ರಕ್ತವನ್ನು ವರ್ಗಾಯಿಸುವಾಗ ಸುರಕ್ಷತಾ ಕ್ರಮವನ್ನು ಅಳವಡಿಸಿಕೊಳ್ಳದೇ ಇರುವುದು ಇದಕ್ಕೆ ಪ್ರಮುಖ ಕಾರಣ ಎನ್ನಲಾಗಿದೆ.
ಚೇತನ್ ಕೊಟಾರಿ ಎಂಬುವವರು ಮಾಹಿತಿ ಹಕ್ಕು ಕಾಯ್ದೆಯಡಿ ಸಲ್ಲಿಸಿದ್ದ ಅರ್ಜಿಗೆ ನ್ಯಾಷನಲ್ ಏಡ್ಸ್ ಕಂಟ್ರೋಲ್ ಆರ್ಗನೈಝೇಶನ್ ಈ ವರದಿಯನ್ನು ನೀಡಿದೆ.
ಸರ್ಕಾರ ಏಡ್ಸ್ ವಿರುದ್ಧ ಎಷ್ಟೇ ಅಭಿಯಾನಗಳನ್ನು ಆರಂಭಿಸಿದರೂ ಆಸ್ಪತ್ರೆಗಳು ಮಾತ್ರ ಸುರಕ್ಷತೆಯನ್ನು ಅಳವಡಿಸದೆ ಜನರ ಆರೋಗ್ಯದೊಂದಿಗೆ ಚೆಲ್ಲಾಟವಾಡುತ್ತಿದೆ ಎಂಬುದು ಈ ವರದಿಯಿಂದ ತಿಳಿದು ಬರುತ್ತದೆ. ಮೊದಲು ಆಸ್ಪತ್ರೆಗಳಿಗೆ ಎಚ್ಐವಿಯ ಬಗ್ಗೆ ಅರಿವು ಮೂಡಿಸುವುದು ಒಳಿತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.