ನವದೆಹಲಿ: ಅನಿಲ್ ಅಂಬಾನಿಯವರ ರಿಲಾಯನ್ಸ್ ಗ್ರೂಪ್ಗೆ ರಕ್ಷಣಾ ವಲಯದಲ್ಲಿ ಯಾವುದೇ ಅನುಭವವಿಲ್ಲ, ಆದರೂ ಈ ಅನುಭವದ ಕೊರತೆ ಈ ಸಂಸ್ಥೆಯನ್ನು ಮಿಲಿಟರಿ ಹಾರ್ಡ್ವೇರ್ಗಳನ್ನು ತಯಾರಿಸುವುದರಿಂದ ಹಿಮ್ಮುಖಗೊಳಿಸುತ್ತಿಲ್ಲ ಎಂಬುದು ನಿಜ.
ಮಿಲಿಟರಿ ಹೆಲಿಕಾಫ್ಟರ್, ಸಬ್ಮರೈನ್ ಮತ್ತು ಮಿಸೆಲ್ಗಳನ್ನು ತಯಾರಿಸುವ ಅತ್ಯಂತ ಧೈರ್ಯಯುತ ನಿರ್ಧಾರವನ್ನು ತೆಗೆದುಕೊಳ್ಳಲು ಅನಿಲ್ ಅಂಬಾನಿಯವರ ರಿಲಾಯನ್ಸ್ ಸಂಸ್ಥೆ ಮುಂದಾಗಿದೆ.
ರಕ್ಷಣಾ ವಲಯವನ್ನು ಮೇಕ್ ಇನ್ ಇಂಡಿಯಾ ಯೋಜನೆಯ ಅತೀ ದೊಡ್ಡ ವಲಯವಾಗಿ ಪ್ರಧಾನಿ ನರೇಂದ್ರ ಮೋದಿ ನೋಡಿಕೊಂಡಿದ್ದಾರೆ, ಯಾವುದೇ ರಕ್ಷಣಾ ಕಾಂಟ್ರ್ಯಾಕ್ಟ್ಗೆ ವಿದೇಶಿ ಏಜೆನ್ಸಿಗಳು ಭಾರತದ ಸ್ಥಳೀಯ ಸಂಸ್ಥೆಗಳೊಂದಿಗೆ ಕೈಜೋಡಿಸಲಿ, ತಂತ್ರಜ್ಞಾನವನ್ನು ಕಳುಹಿಸಲಿ, ತಯಾರಕರನ್ನು ಭಾರತಕ್ಕೆ ಕಳುಹಿಸಿಕೊಡಲಿ ಎಂದು ಅವರು ಬಯಸುತ್ತಿದ್ದಾರೆ.
ಸುಮಾರು 250 ಬಿಲಿಯನ್ ಡಾಲರ್ ಮೊತ್ತದ ರಕ್ಷಣಾ ಕಂಟ್ರ್ಯಾಕ್ಟ್ನ್ನು ಮುಂದಿನ ಹತ್ತು ವರ್ಷದಲ್ಲಿ ಭಾರತ ಮಾಡಲಿದೆ. ಭಾರತದಲ್ಲೆ ರಕ್ಷಣಾ ಪರಿಕರಗಳ ಉತ್ಪಾದನೆಯಾಗಲಿ ಎಂಬ ಮಹತ್ವಾಕಾಂಕ್ಷೆಯೂ ಸರ್ಕಾರಕ್ಕಿದೆ. ಇದೀಗ ಅಂಬಾನಿಯಂತಹ ಉದ್ಯಮಿಗಳು ರಕ್ಷಣಾ ಪರಿಕರಗಳ ಉತ್ಪಾದನೆಗೆ ಧೈರ್ಯ ಮಾಡಿದ್ದಾರೆ. ಇದೊಂದು ನಿಜಕ್ಕೂ ಉತ್ತಮ ಬೆಳವಣಿಗೆಯಾಗಿದೆ.
ಸಾಬ್ ಇಂಡಿಯಾ ಟೆಕ್ನಾಲಜಿ ಮತ್ತು ರಿಲಾಯನ್ಸ್ ಈಗಾಗಲೇ ಭಾರತೀಯ ನೌಕೆ ಮತ್ತು ಕೋಸ್ಟ್ ಗಾರ್ಡ್ಗಾಗಿ ಮುಂದಿನ ಪೀಳಿಗೆಯ ಕಂಬಾತ್ ಮ್ಯಾನೇಜ್ಮೆಂಟ್ ಸಿಸ್ಟಮ್ನ್ನು ತಯಾರಿಸುವತ್ತ ಕಾರ್ಯ ಮಾಡುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.