ನವದೆಹಲಿ: ಸೋನಿಯಾ ಗಾಂಧಿ ಅಳಿಯ ರಾಬರ್ಟ್ ವಾದ್ರಾ ಮತ್ತೊಂದು ಹಗರಣದ ಸುಳಿಯಲ್ಲಿ ಸಿಲುಕುವ ಸಾಧ್ಯತೆಗಳು ಗೋಚರಿಸುತ್ತಿವೆ. 2009 ರಲ್ಲಿ ಶಶ್ತ್ರಾಸ್ತ್ರ ಡೀಲರ್ ಒಬ್ಬ ಅವರಿಗೆ ಲಂಡನ್ನಲ್ಲಿ ಬೇನಾಮಿ ಫ್ಲ್ಯಾಟ್ವೊಂದನ್ನು ಉಡುಗೊರೆಯಾಗಿ ನೀಡಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ.
ಈ ಆರೋಪದ ಬಗ್ಗೆ ಹಣಕಾಸು ಸಚಿವಾಲಯ ಪರಿಶೀಲನೆ ನಡೆಸುತ್ತಿದೆ. ಜಾರಿನಿರ್ದೇಶನಾಲಯ ಮತ್ತು ತೆರಿಗೆ ಅಧಿಕಾರಿಗಳು, ಸರ್ಕಾರಿ ಏಜೆನ್ಸಿಗಳು ವರದಿ ತರಿಸಿಕೊಂಡು ವಾದ್ರಾ ಮತ್ತು ಆತನ ಕಾರ್ಯದರ್ಶಿ ಮನೋಜ್ ಅರೋರರ ಇ-ಮೇಲ್ ಕಮ್ಯೂನಿಕೇಶನ್ ಪರಿಶೀಲನೆ ಮಾಡಿ ತನಿಖೆ ಆರಂಭಿಸಿವೆ ಎಂದು ಮೂಲಗಳು ತಿಳಿಸಿವೆ.
ಲಂಡನ್ ಹೌಸ್ನ ಅಭಿವೃದ್ಧಿ, ಪೇಮೆಂಟ್ಗೆ ಸಂಬಂಧಿಸಿದಂತೆ ವಾದ್ರಾ ಮತ್ತು ಅರೋರ ಇಮೇಲ್ಗಳಲ್ಲಿ ಸಾಕಷ್ಟು ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.
12 ಎಲ್ಲೆರ್ಟನ್ ಹೌಸ್ನಲ್ಲಿ ಈ ಮನೆಯಿದ್ದು, 19 ಕೋಟಿಗೆ 2009 ರ ಅಕ್ಟೋಬರ್ನಲ್ಲಿ ಖರೀದಿಸಲಾಗಿದೆ. 2010 ರಲ್ಲಿ ಮಾರಲಾಗಿದೆ ಎಂದು ವರದಿ ತಿಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.