ನವದೆಹಲಿ: ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ವಿರುದ್ಧ ಮಾತನಾಡುವ, ಅವರಿಗೆ ಬಹಿರಂಗ ಸಲಹೆ ನೀಡುವ ಸಾಹಸವನ್ನು ಇದುವರೆಗೆ ಕಾಂಗ್ರೆಸ್ ನಾಯಕರು ಮಾಡಿದ್ದು ಕಡಿಮೆ. ಆದರೀಗ ಕೆಲ ನಾಯಕರು ಬಹಿರಂಗವಾಗಿಯೇ ತಮ್ಮ ನಾಯಕಿಗೆ ಕಿವಿಮಾತು ಹೇಳುವ ಸಾಹಸ ಮಾಡುತ್ತಿದ್ದಾರೆ.
ಅಂತವರಲ್ಲಿ ಅಮೃತಸರದ ಎಂಪಿ ಕ್ಯಾಪ್ಟನ್ ಅಮರೇಂದರ್ ಸಿಂಗ್ ಅವರೂ ಒಬ್ಬರು. ಸೋನಿಯಾ ಗಾಂಧಿಗೆ ಮುಖ್ಯಸ್ಥ ಸ್ಥಾನದಿಂದ ಕೆಳಗಿಳಿಯಲು ಇದು ಸೂಕ್ತ ಸಮಯ, ರಾಹುಲ್ ಮತ್ತು ಪ್ರಿಯಾಂಕರಿಗೆ ಅವರು ಜಾಗ ಮಾಡಿಕೊಡಲಿ ಎಂದು ಇವರು ಹೇಳಿದ್ದಾರೆ.
1998 ರಿಂದ ಸೋನಿಯಾರೊಂದಿಗೆ ಕೆಲಸ ಮಾಡುತ್ತಿದ್ದೇನೆ. ಆಕೆ ಉತ್ತಮ ನಾಯಕಿ. ಈಗ ಆಕೆಗೆ 70 ವರ್ಷ. ನನಗೆ 74. ಹೊಸ ತಲೆಮಾರಿಗೆ ಅಧಿಕಾರ ಸಿಗುವ ಸಂದರ್ಭ ಬಂದಿದೆ. ಆಕೆ ಅಧಿಕಾರ ಹಸ್ತಾಂತರಿಸಿದರೆ ಒಳ್ಳೆಯದು ಎಂಬುದು ನನ್ನ ಭಾವನೆ ಎಂದು ಅಮರೇಂದರ್ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.